ಬಾಹ್ಯಾಕಾಶ; ಉಪಗ್ರಹಗಳ ಬಗ್ಗೆ ಸಂವಾದ

ಬಾಹ್ಯಾಕಾಶ; ಉಪಗ್ರಹಗಳ ಬಗ್ಗೆ ಸಂವಾದ Conversation about Space; satellites

ಲೋಕದರ್ಶನ ವರದಿ 

ಯಮಕನಮರಡಿ 08: ಡಾ. ಕಿರಣ ಕುಮಾರ್, ಮಾಜಿ ಅಧ್ಯಕ್ಷರು ಇಸ್ರೋ, ಇವರು ಯಮಕನಮರಡಿ ವಿದ್ಯಾ ವರ್ಧಕ ಸಂಘದ ವಿದ್ಯಾರ್ಥಿಗಳಿಗೊಂದಿಗೆ ಬಾಹ್ಯಾಕಾಶ ಮತ್ತು ಉಪಗ್ರಹಗಳ ಬಗ್ಗೆ ಸಂವಾದ ನಡೆಸಿದರು.  

ಇವರು ಭಾರತದ ಮಹತ್ವಾಕಾಂಕ್ಷೆಯ "ಮಂಗಳಯಾನ ಮತ್ತು ಚಂದ್ರಯಾನ -1 ರ ಯಶಸ್ಸಿನ ಹಿಂದೆ ಇವರ ತಾಂತ್ರಿಕ ನೈಪುಣ್ಯತೆ ಅಪಾರವಾಗಿದೆ. ಜೊತೆಗೆ ರೈತರ ಸಲುವಾಗಿ ಹವಾಮಾನ ಮುನ್ಸೂಚನೆ ಹಾಗೂ ಅಂತರ್ಜಲ ಮ್ಯಾಪಿಂಗ್ ಮತ್ತು ವಿಪತ್ತು ನಿರ್ವಹಣೆ ಸಲುವಾಗಿ ಹಲವಾರು ಸಂಶೋಧನೆಗಳು ಮಾಡಿರುತ್ತಾರೆ. ಇವರು ಅಧ್ಯಕ್ಷರಾಗಿದ್ದ ಸಮಯದಲ್ಲಿ ಸುಮಾರು 104 ಉಪಗ್ರಹಗಳು ಉಡಾವಣೆ ಮಾಡಿರುವುದು ಜಾಗತಿಕ ದಾಖಲೆಯಾಗಿದೆ. ಈ ಬಗ್ಗೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.  

ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಹಂಜಿ ಹಾಗೂ ಸದಸ್ಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.