ಜೋಡಿ ನಾಗದೇವತಾ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ
Consecration of the new stone idols of the twin Serpent Deities (Naga Devatas)
ಕಂಪ್ಲಿ, ಆ.13: ಪಟ್ಟಣದ 5ನೇ ವಾರ್ಡ್ನ ಇಂದಿರಾನಗರದಲ್ಲಿರುವ ಉದ್ಭವ ನಾಗೇಂದ್ರ ದೇವಾಲಯ (ಜೋಡಿ ನಾಗದೇವತಾ)ದಲ್ಲಿ ಜೋಡಿ ನಾಗದೇವತಾ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಅಶ್ವತ್ಥನಾರಾಯಣ ದೇವತಾ ಕಲ್ಯಾಣ ಮಹೋತ್ಸವ ಗುರುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಶಿವರಾಮಕೃಷ್ಣ ಶರ್ಮಾ (ಶಿವಾಜಿ) ಅವರ ಸಾನ್ನಿಧ್ಯದಲ್ಲಿ ಬೆಳಿಗ್ಗೆ ಗಂಗಾಪೂಜೆ, ಗೋ ಪೂಜೆ, ಮಹಾಗಣಪತಿ ಪೂಜೆ, ಪುಣ್ಯವಾಚನ, ಕಂಕಣ ಪೂಜೆ, ನವಗ್ರಹ ಪೂಜೆ, ಪಂಚಾಮೃತಾಭಿಷೇಕ, ಜಲಾಧಿವಾಸ, ಪುಷ್ಪಾಧಿವಾಸ, ಹೋಮ, ಹವನ, ಪೂರ್ಣಾಹುತಿ ಹಾಗೂ ಅಷ್ಟೋತ್ತರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ನಂತರ ಜೋಡಿ ನಾಗದೇವತಾ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಅಶ್ವತ್ಥನಾರಾಯಣ ದೇವತಾ ಕಲ್ಯಾಣ ಮಹೋತ್ಸವವನ್ನು ಭಕ್ತಿಭಾವದಿಂದ ನಡೆಸಲಾಯಿತು. ಮೂರ್ತಿ ಪ್ರತಿಷ್ಠಾಪನೆ ಮತ್ತು ಕಲ್ಯಾಣ ಮಹೋತ್ಸವದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾಯಿಗೆ, ಕಪೂರ ಅರ್ಿಸಿ ದೇವರ ದರ್ಶನ ಪಡೆದರು. ಬಳಿಕ ಅನ್ನ ಸಂತರೆ್ಣಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಕರೆಕಲ್ ಮನೋಹರ, ಎಸ್. ಸುರೇಶ್, ಯು. ವೆಂಕಟೇಶ್, ಜಿ. ರಾಜ್, ಆಟೋ ರಾಘವೇಂದ್ರ, ಜಿ. ಯಲ್ಲಪ್ಪ, ಬಿ. ಫಕ್ಕೀರ್ಪ, ಜಿ. ವೆಂಕಟೇಶ್, ರಮೇಶ್, ಯು. ನವೀನ್, ಎಸ್. ವಿರೇಶ್, ಡೆಕೋರೇಷನ್ ನಾಗೇಂದ್ರ, ಬಸವರಾಜ ಸೇರಿದಂತೆ ಜೋಡಿ ನಾಗದೇವತಾ ಸದ್ಭಕ್ತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 