ಜಮಖಂಡಿ ಓಲೇಮಠದಲ್ಲಿ ನಡೆದ ಅಭಿನಂದನಾ ಸಮಾರಂಭ
Congratulatory ceremony held at Jamkhandi Ole Math
ಜಮಖಂಡಿ ಓಲೇಮಠದಲ್ಲಿ ನಡೆದ ಅಭಿನಂದನಾ ಸಮಾರಂಭ
ಜಮಖಂಡಿ 31: ನಗರದ ಓಲೇಮಠದಲ್ಲಿ ನಡೆದಬಸವ ಜಯಂತಿ ದಿನದಂದು ಅರ್ಥಪೂರ್ಣವಾದ ಕಾರ್ಯಕ್ರಮ ಜರುಗಿದು ಶ್ಲಾಘನೀಯವಾಗಿದೆ. ಮಠದಲ್ಲಿ ನಡೆಯುವ ಕಾರ್ಯಕ್ರಮವನ್ನು ಭಕ್ತರು ಸೇವೆಯಂದು ತಿಳಿದುಕೊಳ್ಳಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಓಲೇಮಠದ ಸಭಾ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭ ಹಾಗೂ ಲೆಕ್ಕ-ಪತ್ರದ ವಿವರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಸೇವೆಯನ್ನು ಪ್ರಚಾರಗೋಷ್ಠರ ಮಾಡಿಕೊಳ್ಳುತ್ತಾರೆ ಆದರೆ ಎಲ್ಲರೂ ಕೂಡಿಕೊಂಡು ಭಕ್ತಿಭಾವದಿಂದ ಸೇವೆ ಮಾಡಿದನ್ನು ಯಾರ ಬಳಿಯು ಹೇಳಿಕೊಳ್ಳಬಾರದು. ಅದು ಮಠಕ್ಕೆ ಸಲ್ಲಿಸಿದ ಸೇವೆಯಾಗುವುದಿಲ್ಲ.
ಇಲ್ಲಿ ನಡೆಯುತ್ತಿರುವ ಲೆಕ್ಕ- ಪತ್ರವನ್ನು ಹೇಳುವ ಅವಶ್ಯಕತೆಯು ಆಗಬಾರದು. ಯಾಕೆಂದರೆ ಮಠದ ಶ್ರೀಗಳ ಮೇಲೆ ಅಪಾರವಾದ ನಂಬಿಕೆ, ಭಯ, ಭಕ್ತಿ ಇರುತ್ತದೆ. ಆದರಿಂದ ಶ್ರೀಗಳ ಮಠದಲ್ಲಿ ನಡೆದ ಕಾರ್ಯಕ್ರಮದ ಬಗ್ಗೆ ಲೆಕ್ಕ-ಪತ್ರವನ್ನು ಭಕ್ತರು ಯಾವತ್ತು ಬಹಿರಂಗವಾಗಿ ಹೇಳುವದು ಸೂಕ್ತವಲ್ಲ. ಮಠದ ಹಿರಿಯರು, ಗ್ರಾಮದ ಹಿರಿಯರು, ಪ್ರಮುಖರು ಮಾತ್ರ ಸೇರಿಕೊಂಡು ಲೆಕ್ಕ-ಪತ್ರಖರ್ಚನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿದಿವ್ಯ ಸಾನಿಧ್ಯವನ್ನು ವಹಿಸಿದ ಮುತ್ತಿನಕಂತ್ತಿಮಠದ ಶಿವಲಿಂಗ ಪಂಡಿತರಾದ್ಯ ಶಿವಾಚಾರ್ಯ ಶ್ರೀಗಳು, ಓಲೇಮಠದ ಆನಂದ ದೇವರು ಆರ್ಶೀವಚನ ನೀಡಿದರು.
ಎನ್,ಎಸ್, ದೇವರವರ ಮಾತನಾಡಿದರು. ಶಿವಾನಂದ ಕೊಣ್ಣೂರ ಓಲೇ ಮಠದ ಕಾರ್ಯಕ್ರಮದ ಖರ್ಚು ಮತ್ತು ಜಮೆ ಲೆಕ್ಕ- ಪತ್ರ ವರದಿ ಸಲಿಸಿದರು.ಈರಯ್ಯ ಮಠಪತಿ ಸ್ವಾಗತಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 