ರಾಯಬಾಗ

ರಾಯಬಾಗ ಕ್ಷೇತ್ರದ ಗ್ರಾಮಗಳ ಸರ್ವಾಂಗಿನ ವಿಕಾಸಕ್ಕೆ ಬದ್ಧ : ಪ್ರಿಯಾಂಕ ಜಾರಕಿಹೊಳಿ

ರಾಯಬಾಗ ಕ್ಷೇತ್ರದ ಗ್ರಾಮಗಳ ಸರ್ವಾಂಗಿನ ವಿಕಾಸಕ್ಕೆ ಬದ್ಧ : ಪ್ರಿಯಾಂಕ ಜಾರಕಿಹೊಳಿ

ರಾಯಬಾಗ 07 : ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಮಾದರಿ ಮಾಡುವುದೇ ನಮ್ಮ ಗುರಿ ಎಂದು ಚಿಕ್ಕೋಡಿ ಸಂಸದಿ ಪ್ರಿಯಾಂಕ ಜಾರಕಿಹೊಳಿ ಅವರು  ಹೇಳಿದರು. ತಾಲ್ಲೂಕಿನ ನಸಲಾಪೂರ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಜನವಸ್ಥಿಯಲ್ಲಿ ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ  ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಂತರ ಗೊಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎನ್ ಎ ಮಗದುಮ ಮಾತನಾಡಿ, ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಸಂಸದರು ಕ್ಷೇತ್ರ ಅಭಿವೃದ್ಧಿ ಮಾಡುತ್ತಿದ್ದಾರೆ. ರಾಯಬಾಗ ವಿಧಾನಸಭಾ ಕ್ಷೇತ್ರದಲ್ಲಿ ಕೋಟ್ಯಂತರ ರೂ ಅಭಿವೃದ್ಧಿ ಕಾಮಗಾರಿ ತಂದು ಕೆಲಸ ಮಾಡುತ್ತಿರುವು ಸಂತಸದ ವಿಷಯವಾಗಿದೆ ಎಂದರು.ಈ ವೇಳೆ ಮಹಾವೀರ ಮೋಹಿತೆ, ಶಿವನಗೌಡ ಪಾಟೀಲ, ಅಣ್ಣಾಸಾಹೇಬ ಸಮಾಜೆ, ಅಜಿತ ಪಾಟೀಲ, ನೆಹರು ಮಗದುಮ, ಅಬ್ದುಲ ತಾಂಬಟಿ, ಹಾಜಿ ಮುಲ್ಲಾ, ಅರುಣ ನಾಯಿಕ, ದೀಲೀಪ ಜಮಾದಾರ, ನಿರ್ಮಲಾ ಪಾಟೀಲ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ