ಪ್ರಥಮ ಅಕ್ಷರಾಭ್ಯಾಸ ಮತ್ತು ಪ್ರಥಮ ಪಾಠಕ್ಕೆ ಚಾಲನೆ
Commencement of the first lessons in writing and reading
ತಾಳಿಕೋಟೆ 10: ಬಾಲಭಾರತಿ ವಿದ್ಯಾಮಂದಿರದಲ್ಲಿ ಶಿಶು ಮಂದಿರ ಮತ್ತು ಒಂದನೆಯ ತರಗತಿ ಮಕ್ಕಳಿಗೆ ಪ್ರಥಮ ಅಕ್ಷರಾಭ್ಯಾಸ ಮತ್ತು ಪ್ರಥಮ ಪಾಠ ಕಾರ್ಯಕ್ರಮವು ಗುರುವಾರ ನಡೆಯಿತು.ತಾಯಿಯ ಮಡಿಲಲ್ಲಿ ಕುಳಿತ ಪುಟ್ಟಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಶ್ರೀಧರಾಚಾರ್ಯ ಜೋಶಿ ಶ್ರೀಕಾರ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಸಮೂಹ ಸಂಪನ್ಮೂಲ ವ್ಯಕ್ತಿ ರಾಜು ವಿಜಾಪುರ, ಶೃಂಗೇರಿ ಮಠದಲ್ಲಿ ಇರುವಂತೆ ಮೊದಲ ಅಕ್ಷರಾಭ್ಯಾಸದ ಸಂಸ್ಕೃತಿಯನ್ನು ಪಟ್ಟಣದ ಬಾಲಭಾರತಿ ಶಿಕ್ಷಣ ಸಂಸ್ಥೆಯವರೂ ಅನುಸರಣೆ ಮಾಡುತ್ತಿರುವುದು ಸಂತಸ ತಂದಿದೆ. ಮಕ್ಕಳಲ್ಲಿ ನಾಡಿನ ಸಂಸ್ಕಾರ, ಸಂಸ್ಕೃತಿ ಬಿತ್ತವುದರೊಂದಿಗೆ ಉತ್ತಮ ಮೌಲ್ಯಗಳನ್ನು ಸಹ ಈ ಶಾಲೆಯವರು ಮಕ್ಕಳಲ್ಲಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ.
ಕೋಶಾಧ್ಯಕ್ಷ ಶ್ಯಾಮ ಹಂಚಾಟೆ, ಬಾಲಭಾರತಿ ಪ್ರಾಥಮಿಕ ಶಾಲೆ ಅಧ್ಯಕ್ಷ ಹಣಮಂತ್ರಾವ್ ದೇಶಪಾಂಡೆ, ಸ್ವಾಮಿ ವಿವೇಕಾನಂದ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆ ಅಧ್ಯಕ್ಷ ಶ್ರೀನಿವಾಸ ಸೋನಾರ, ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು. 150ಕ್ಕೂ ಅಧಿಕ ಮಕ್ಕಳು ಅಕ್ಷರಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.ಮುಖ್ಯಶಿಕ್ಕರುಗಳಾದ, ಪ್ರದೀಪ ಗೊಂಡ, ಮಹೇಶ ಓದಿ ಹಿರಿಯ ಶಿಕ್ಷಕ ರಮೇಶ ಕುಲಕಲರ್ಣಿ, ಧರ್ಮಣ್ಣ ಕಟ್ಟಿಮನಿ, ಶೈಲಶ್ರೀ ಸುರಪುರ, ಸಮೃದ್ಧಿ ಸುರಪುರ ಇತರರಿದ್ದರು. ಸನ್ನಿಧಿ ಯಾತಗಿರಿ ಸಹನಾ ವಾಲಿ ನಿರ್ವಹಿಸಿದರು, ಶ್ರೀದೇವಿ ಬಿರಾದಾರ ಸ್ವಾಗತಿಸಿದರು. ಗಿರಿಜಾ ಮೊಹಿತೆ ಮಾತಾಜಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 