ರಬಕವಿಯಲ್ಲಿ ನಾಮದೇವ ಮಹಾರಾಜರ ಪುಣ್ಯಸ್ಮರಣೆ
Commemoration of Namdev Maharaj in Rabakavi
ಲೋಕದರ್ಶನ ವರದಿ
ರಬಕವಿ-ಬನಹಟ್ಟಿ 13: ಶ್ರೀ ಸಂತ ಶಿರೋಮಣಿ ನಾಮದೇವ ಮಹಾರಾಜರ 676 ನೇ ಸಂಜೀವನ ಸೋಹಳ ಸಮಾರಂಭ ಶ್ರೀ ಸಂತ ನಾಮದೇವ ಸಿಂಪಿ ಸಮಾಜದ ಅಭಿವೃದ್ಧಿ ಸಮಿತಿ ರಬಕವಿ ಇವರ ಆಶ್ರಯಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಪ್ಪಣ್ಣ ಖಟಾವಕರ ವಹಿಸಿದ್ದರು. ಭಜನೆ, ಕೀರ್ತನೆ ನಾಮಸ್ಮರಣೆ, ವೀಣಾ ಪೂಜೆ, ಪ್ರಸಾದ ಕಾರ್ಯಕ್ರಮಗಳು ನಡೆದವು. ನಾಮದೇವ ಸಿಂಪಿ ಸಮಾಜದ ಪ್ರಮುಖರಾದ ಪ್ರಕಾಶ ಖಟಾವಕರ, ಆತ್ಮಾರಾಮ ಬಕರೆ, ಮೇಘರಾಜ ಮಾಳವದೆ, ವಿವೇಕ ಕೋಪರ್ಡೆ, ಸಂಗಪ್ಪ ಭಸ್ಮೆ, ಜಯವಂತ ಕೋಪರ್ಡೆ, ಶ್ಯಾಮ ಭಸ್ಮೆ, ಆನಂದ ಕೋಪರ್ಡೆ, ಶ್ರೀನಿವಾಸ ಭಸ್ಮೆ, ವಿನಾಯಕ ಬಕರೆ ಸೇರಿದಂತೆ ಅನೇಕ ಮಹಿಳೆಯರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 