ಸಾಂಸ್ಕೃತಿಕ ಕ್ರೀಡಾ ಯುಥ್ ರೆಡ್ ಕ್ರಾಸ್ ಹಾಗೂ ಎನ್‌.ಎಸ್‌.ಎಸ್‌. ಚಟುವಟಿಕೆಗಳ ಸಮಾರೋಪ ಸಮಾರಂಭ

ಸಾಂಸ್ಕೃತಿಕ ಕ್ರೀಡಾ ಯುಥ್ ರೆಡ್ ಕ್ರಾಸ್ ಹಾಗೂ ಎನ್‌.ಎಸ್‌.ಎಸ್‌. ಚಟುವಟಿಕೆಗಳ ಸಮಾರೋಪ ಸಮಾರಂಭ   Closing ceremony of cultural sports Youth Red Cross and NSS activities

ಲೋಕದರ್ಶನ ವರದಿ 

ಹಾವೇರಿ 15 : ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಹುಕ್ಕೇರಿಮಠ ಹಾವೇರಿಯಲ್ಲಿ  2025-26 ನೇ ಶೈಕ್ಷಣೆಕ ಸಾಲಿನ ಸಾಂಸ್ಕೃತಿಕ ಕ್ರೀಡಾ ಯುಥ್ ರೆಡ್ ಕ್ರಾಸ್ ಹಾಗೂ ಎನ್‌.ಎಸ್‌.ಎಸ್‌. ಚಟುವಟಿಕೆಗಳ ಸಮಾರೋಪ ಸಮಾರಂಭ  ಮತ್ತು ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಬಿಳ್ಕೋಡಿಗೆ ಕಾರ್ಯಕ್ರಮವು ಯಸಶ್ವಿಯಾಗಿ ಜರುಗಿತು.  ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಆರ್ಶೀವಚನ ನೀಡಿದ ಪರಮ ಪೂಜ್ಯ  ಮ.ನಿ.ಪ್ರ. ಡಾ.ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ ಹಾವೇರಿ ಮಹಿಳೆಯು ಸಮಾಜದಲ್ಲಿ ಶಿಕ್ಷಣವನ್ನು ಪಡೆದು ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ತನ್ನ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸದ  ರೇವತಿ ಎಸ್ ಹೊಸಮಠ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಹಾವೇರಿ ಅವರು ಮಾತನಾಡಿ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದೊಂದಿಗೆ ವೃತ್ತಿಗನುಸಾರ ಕೌಶಲ್ಯವನ್ನು ಪಡೆಯಲು ಸಲಹೆ ನೀಡಿದರು, ಮಹಿಳೆಗೆ ಸಂಬಂಧಿಸಿದಂತೆ ತೊಟ್ಟಲನ್ನು ತೂಗುವ ಕೈ ಜಗತ್ತನ್ನು ಆಳಬಲ್ಲದು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಿವಲಿಂಗೇಶ್ವರ ವಿದ್ಯಾಪೀಠದ ಕಾರ್ಯಾಧ್ಯಕ್ಷರಾದ ಎಸ್‌. ಎಸ್‌. ಮುಷ್ಠಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗುವ ಮೂಲಕ ಮಹಾವಿದ್ಯಾಲಯದ ಕೀರ್ತಿಯನ್ನು ಉನ್ನತಿಸಬೇಕೆಂದು ಹಾರೈಸಿದರು.    ಈ ಸಂದರ್ಭದಲ್ಲಿ ವಿದ್ಯಾಪೀಠದ ಆಡಳಿತ ಮಂಡಳಿಯ ಗೌರವ ಉಪಾಧ್ಯಕ್ಷರಾದ ವೀರಣ್ಣ ಅಂಗಡಿ, ವಿದ್ಯಾಪೀಠದ ಸದಸ್ಯರಾದ ಮಹೇಶ ಚಿನ್ನಿಕಟ್ಟಿ ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಪ್ರೊ. ಬಿ.ವಿ ಹಿರೇಮಠ ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ. ಸವಿತಾ. ಎಸ್‌.ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು.ಪ್ರೊ.ಟಿ.ಎನ್‌.ಮಡಿವಾಳರ ಅಥಿತಿ ಪರಿಚಯಿಸಿದರು, ಪ್ರೊ. ವ್ಹಿ.ಕೆ.ಹಲಗಣ್ಣನವರ ನಗದು ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿ ಕೊಟ್ಟರು.

ಪ್ರೋ ನಾಗರಾಜ ಎಂ.ಹೆಚ್ ಕ್ರೀಡಾ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿ ಕೊಟ್ಟರು.ಪ್ರೋ ಪಿ.ಎಮ ಹಾವೇರಿ ಸಾಂಸ್ಕೃತಿಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿ ಕೊಟ್ಟರು. ಪ್ರೊ ಎಸ್‌.ಎ.ಸೈಯದ್ ವಾರ್ಷಿಕ ವರದಿ ವಾಚಿಸಿದರು,ಪ್ರೊ.ಎಂ.ಎಂ. ಮಡಿವಾಳರ ಎನ್‌.ಎಸ್‌.ಎಸ್ ವರದಿ ವಾಚಿಸಿದರು.ಕುಮಾರಿ ಚಂದ್ರಕಲಾ ನಾಗನೂರ ವಂದಿಸಿದರು,ಪ್ರೊ.ಎಸ್‌.ಬಿ.ಗಾಜಿಪುರ  ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ 2025-26 ನೇ ಸಾಲಿನ ಆದರ್ಶ ವಿದ್ಯಾರ್ಥಿನಿ ಬಹುಮಾನವನ್ನು ಬಿ.ಎ ಮತ್ತು ಬಿ,ಕಾಂ ವಿಭಾಗದಿಂದ ಕ್ರಮವಾಗಿ ಪೂರ್ಣಿಮಾ ಕರ್ಜಗಿ ಮತ್ತು ಸುಶ್ಮಿತಾ ಕಾಯಕದ ಪಡೆದುಕೊಂಡರು. ಸಮಗ್ರ ವೀರಾಗ್ರಣಿ ಚಂದ್ರಕಲಾ ನಾಗನೂರ ಪಡೆದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.