ತಿಮ್ಮಾಪುರ ಅವರಿಂದ ಕ್ಲಿನಿಕ್ ಉದ್ಘಾಟನೆ
Clinic inaugurated by Thimmapura
ರನ್ನ ಬೆಳಗಲಿ. 19- ಮುಧೋಳ ತಾಲೂಕಿನ ರನ್ನ ಬೆಳಗಲಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಪಟ್ಟಣ ಪಂಚಾಯತ್ ರನ್ನ ಬೆಳಗಲಿ ಆಶ್ರಯದಲ್ಲಿ ನಮ್ಮ ಕ್ಲೀನಿಕ್ ಉದ್ಘಾಟನೆಯನ್ನು ಗುರುವಾರದಂದು ಅಬಕಾರಿ ಸಚಿವರು ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಆದಂತ ಆರ್ ಬಿ ತಿಮ್ಮಾಪುರವರು ಉದ್ಘಾಟಿಸಿದರು.
ಈ ಕ್ಲಿನಿಕ್ ನಿಂದ ಬಡವರಿಗೆ ಹಾಗೂ ಇನ್ನಿತರವರಿಗೆ ತುಂಬಾ ಅನುಕೂಲವಾಗಲಿದ್ದು ಇಲ್ಲಿ ತುಂಬಾ ನುರಿತ ಮತ್ತು ಅನುಭವಿಕ ವೈದ್ಯರಿದ್ದು ಅದರ ಉಪಯೋಗ ಪಡೆದುಕೊಂಡು ಎಲ್ಲರೂ ಸದೃಢ ಜೀವನ ನಡೆಸಬೇಕೆಂದು ಹೇಳಿದರು. ನಂತರ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಜನತೆ ಆರ್ಥಿಕ ಅಭಿವೃದ್ಧಿ ಹೊಂದಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಜೀವನದಲ್ಲಿ ಎಲ್ಲ ಸಂಪತ್ತಿಗಿಂತ ಆರೋಗ್ಯ ದೊಡ್ಡ ಸಂಪತ್ತು ಎಂದು ಕಾರ್ಯಕ್ರಮದಲ್ಲಿ ಹೇಳಿದರು. ಕಾರ್ಯಕ್ರಮಕ್ಕೆ ರನ್ನ ಬೆಳಗಲಿಯ ಪೂಜ್ಯರಾದ ಶ್ರೀ ಸಿದ್ದರಾಮ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.
ಮುಧೋಳ್ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದುಗೌಡ ಪಾಟೀಲ್ ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ ಕಿವಡಿ, ಡಾ. ವೆಂಕಟೇಶ್ ಮಲಘಣ ಮುಖಂಡರಾದ ಶಿವನಗೌಡ ಪಾಟೀಲ್ ಉದಯ ಸಾರವಾಡ, ಪ್ರವೀಣ್ ಪಾಟೀಲ್, ಸಂಗಪ್ಪ ಅಮಾತಿ, ಚಿನ್ನು ಅಂಬಿ,ಪರಮನಂದ ಕೊಟರಟ್ಟಿ, ಸಿದ್ದು ಮಾಳಿ, ಲಕ್ಕಪ್ಪ ಹಂಚಿನಾಳ, ಮುಬಾರಕ್ ಅತ್ತಾರ್, ನೀಲಕಂಠ ಸೈದಾಪುರ್ ಮುತ್ತಪ್ಪ ಸನ್ನಟ್ಟಿ, ಸದಾಶಿವ್ ಕುಲಗೋಡ, ಮಲ್ಲು ಹೊಸಪೇಟಿ, ಪ್ರಕಾಶ ಕೊಣ್ಣೂರ, ಮುದುಕಪ್ಪ ದೋಬಸಿ ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಹಾಗೂ ಪಟ್ಟಣದ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 