ಚಿಂಚಲಿ ಪ. ಪಂ ಮುಖ್ಯಾಧಿಕಾರಿ ನಿಧನ
ರಾಯಬಾಗ 22; ತಾಲ್ಲೂಕಿನ ಚಿಂಚಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟಸ್ವಾಮಿ ಬಳ್ಳಾರಿ (38) ಸೋಮವಾರ ಹೃದಯಘಾತದಿಂದ ಮೃತಪಟ್ಟರು.
ಕಚೇರಿ ಕೆಲಸದಲ್ಲಿದ್ದಾಗಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಅವರು ಮೃತಪಟ್ಟಿದ್ದಾರೆ.
ಮೃತರು ತಾಯಿ , ಪತ್ನಿ ,ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ತಾಯಿ ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರಾಗಿದ್ದಾರೆ. ಮಂಗಳವಾರ ರಾಯಬಾಗ ಪಟ್ಟಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಚಿಕ್ಕೋಡಿ ಉಪವಿಭಾಗಾಧಿಕಾರಿ, ರಾಯಬಾಗ ತಹಶೀಲ್ದಾರ ಭಾಗವಹಿಸಿದ್ದರು.