ಮುದ್ದೆಬಿಹಾಲ್

ಅನುಷ್ಠಾನ ಕೆಲಸದ ಯೋಜನೆ ಕಾಮಗಾರಿ ಪರೀಶೀಲಿಸಿದ ಚಿದಾನಂದ

ಅನುಷ್ಠಾನ ಕೆಲಸದ ಯೋಜನೆ ಕಾಮಗಾರಿ ಪರೀಶೀಲಿಸಿದ ಚಿದಾನಂದ


ಮುದ್ದೇಬಿಹಾಳ 07: ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನ ಕೆಲಸದ ಯೋಜನೆಗಳಾದ ಕೃಷಿ ಇಲಾಖೆ, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಯ ಉದ್ಯೋಗ ಖಾತ್ರಿಯ ಯೋಜನೆಯ ಹಾಗೂ 15ನೇ ಹಣಕಾಸು ಯೋಜನೆವಿವಿಧ ಕಾಮಗಾರಿಗಳನ್ನು ಸಾಮಾಜಿಕ ಲೆಕ್ಕ ಪರಿಶೋಧನೆಯ ಕಾರ್ಯಕ್ರಮದ ವ್ಯವಸ್ಥಾಪಕ ಚಿದಾನಂದ ಕೋಳಾರಿ ಪರೀಶೀಲನೆಯನ್ನು ಮಾಡಿದರು. 

ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯಿತಿಯಲ್ಲಿ  2025-26 ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಲೆಕ್ಕ ಪರಿಶೋಧನೆ ಹಾಗೂ 15 ನೇ ಹಣಕಾಸಿನ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನೆ ಬಗ್ಗೆ ಗ್ರಾಮ ಸಭೆಯಲ್ಲಿ ಈ ವೇಳೆ ಅವರು ಮಂಡಿಸಿದರು. ನಂತರ ಗ್ರಾ.ಪಂ ಮಟ್ಟದಲ್ಲಿ ನಡೆದಂತ ಕಾಮಗಾರಿ ಕೆಲಸದ ಬಗ್ಗೆ ಆಕ್ಷೇಪಣೆ ಇದ್ದರೆ ತಮ್ಮ ವ್ಯಾಪ್ತಿಗೆ ದೂರು ನೀಡಬಹುದು ಈ ಬಗ್ಗೆ ಪರೀಶೀಲನೆ ಮಾಡಲಾಗುವುದು ಎಂದು ಅವರು ಹೇಳಿದರು.  

ಇನ್ನು ಕವಡಿಮಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮದಲ್ಲಿ ಕೃಷಿಹೊಠ, ಬದು ನಿರ್ಮಾಣ, ದನದ ಕೊಟ್ಟಿಗೆ, ಕುರಿಶೆಡ್, ರಸ್ತೆ ಸುಧಾರಣೆ, ಈ ಕಾಮಗಾರಿಗಳು ಪೂರ್ಣಗೊಂಡಿವೆ. ಈ ಕೆಲಸ 5 ವರ್ಷದವರೆಗೆ ಕೆಲಸ ಉಳಿದರೆ ಸರ್ಕಾರ ಕೊಟ್ಟ ಅನುದಾನ ಸದ್ಬಳಕೆ ಆಗುತ್ತದೆ ಎಂದು ಚಿದಾನಂದ ಕೋಳಾರಿ ತಿಳಿಸಿದರು.ಈ ಸಂದರ್ಭದಲ್ಲಿ ಸುಜಾತ ರಾಠೋಡ ಕಾಮಗಾರಿ ವರದಿ ಮಂಡನೆ ಮಾಡಿದರೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು, ಕೃಷಿ ಇಲಾಖೆ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಮುಖಂಡರು ಮತ್ತು ರೈತರು ಇದ್ದರು. 


ಸುದ್ದಿ ಓದಿ