ಚೆಸ್‌: ಪ್ರಭಾಕರ ಬಡಿಗೇರ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಚೆಸ್‌: ಪ್ರಭಾಕರ ಬಡಿಗೇರ ಜಿಲ್ಲಾ ಮಟ್ಟಕ್ಕೆ ಆಯ್ಕೆ  Chess: Prabhakar Badiger selected for the district level

ಪಾಲಬಾವಿ 10: ಸಮೀಪದ ಕಪ್ಪಲಗುದ್ದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಉನ್ನತೀಕರಿಸಿದ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಪ್ರಭಾಕರ ಶಂಕರ ಬಡಿಗೇರ, ಹಾರೂಗೇರಿಯಲ್ಲಿ ನಡೆದ 2026-27ನೇ ಸಾಲಿನ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ವಿದ್ಯಾರ್ಥಿಯ ಸಾಧನೆಗೆ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕ ಮಹಾವೀರ ಜೀರಗ್ಯಾಳ, ಎಸ್ಡಿಎಂಸಿ ಅಧ್ಯಕ್ಷ ಗುರು ಅಂಗಡಿ, ಪ್ರಭಾರಿ ಮುಖ್ಯಗುರು ಮುಕುಂದ ಬಡಿಗೇರ, ಪಿಡಿಒ ಬಿ.ಎಸ್‌. ನಾಗನೂರ, ತರಬೇತುದಾರ ಸಂತೋಷ ತಮದಡ್ಡಿ, ಸಿಆರ​‍್ಿ ರಮೇಶ ಬಿಸನಕೊಪ್ಪ, ವಿಶ್ರಾಂತ ಮುಖ್ಯಶಿಕ್ಷಕ ಪಿ.ಎಂ. ದಿವಾಕರ, ದೈಹಿಕ ಶಿಕ್ಷಕ ಸರ್ದಾರ್ ಜಮಾದಾರ, ಶಾಂತವೀರ ಬುರ್ಲಟ್ಟಿ ಹಾಗೂ ಎಸ್ಡಿಎಂಸಿ ಸದಸ್ಯರು ಅಭಿನಂದಿಸಿದ್ದಾರೆ.