ಶಿವಶರಣ ದೇವರ ದಾಸಿಮಯ್ಯನವರ ಜಯಂತಿ ಆಚರಣೆ
Celebration of the birth anniversary of Dasimayya, the patron saint of Shiva
ಲೋಕದರ್ಶನ ವರದಿ
ಯರಗಟ್ಟಿ, 23 : ಪಟ್ಟಣದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ 12ನೇ ಶತಮಾನದ ಆದ್ಯ ವಚನಕಾರ, ಶಿವಶರಣ ದೇವರ ದಾಸಿಮಯ್ಯನವರ ಜಯಂತಿಯನ್ನು ಅತ್ಯಂತ ಸಡಗರ ಹಾಗೂ ಭಕ್ತಿ-ಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ ಎಮ್. ವ್ಹಿ. ಗುಂಡಪ್ಪಗೋಳ ಅವರು ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ವಚನ ಸಾಹಿತ್ಯಕ್ಕೆ ಭದ್ರ ಅಡಿಪಾಯ ಹಾಕಿದ ದಾಸಿಮಯ್ಯನವರ ‘ರಾಮನಾಥ ‘ಅಂಕಿತನಾಮದ ವಚನಗಳು ಇಂದಿನ ಸಮಾಜಕ್ಕೆ ದಾರೀದೀಪವಾಗಿವೆ. ನೇಯ್ಗೆ ಕಾಯಕದ ಮೂಲಕವೇ ಕೈಲಾಸ ಕಂಡ ದಾಸಿಮಯ್ಯನವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ ಎಸ್. ಎಸ್. ಜಾದವ, ಶಿರಸ್ತೇದಾರ ಎಸ್. ಬಿ. ಕುಲಕರ್ಣಿ, ಲೀಲಾವತಿ ತಳವಾರ, ಗ್ರಾಮ ಆಡಳಿತಾಧಿಕಾರಿಗಳಾದ ಎಲ್. ಬಿ. ದಳವಾಯಿ, ಎ. ಬಿ. ಹುಣಶ್ಯಾಳ, ಶಾಹೀನ ಮಿಶ್ರಕೋಟಿ, ಸ್ವರೂಪ ಚಪಳಿ, ಲಕ್ಕಣ್ಣ ಪೂಜೇರ, ವಿಜಯ ಉಪ್ಪಿನ, ಈರಣ್ಣಾ ಹುಲ್ಲೂರ, ಫೀರೋಜ ಖಾದ್ರಿ, ಚಿದಂಬರ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 