ಅಂಗನವಾಡಿ ಕೇಂದ್ರದಲ್ಲಿ ಸಸಿ ನೆಡುವ ಮೂಲಕ ಗೃಹಲಕ್ಷ್ಮಿ ಯೋಜನೆ 3ನೇ ವಾರ್ಷಿಕೋತ್ಸವ ಆಚರಣೆ

ಅಂಗನವಾಡಿ ಕೇಂದ್ರದಲ್ಲಿ ಸಸಿ ನೆಡುವ ಮೂಲಕ ಗೃಹಲಕ್ಷ್ಮಿ ಯೋಜನೆ 3ನೇ ವಾರ್ಷಿಕೋತ್ಸವ ಆಚರಣೆ  Celebration of the Gruha Lakshmi scheme's 3rd anniversary by planting a sapling at the Anganwadi cen

ಗದಗ, ಜು. 29: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಮೂರನೇ ವಾರ್ಷಿಕೋತ್ಸವವನ್ನು ಗದಗ-ಬೆಟಗೇರಿ ನಗರಸಭೆಯ 27ನೇ ವಾರ್ಡ್ನ ಸಿದ್ಧಾರ್ಥನಗರ ಅಂಗನವಾಡಿ ಕೇಂದ್ರದ ಆವರಣದಲ್ಲಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.  

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗೃಹಲಕ್ಷ್ಮಿ ಯೋಜನೆ ಮಹತ್ವದ ಕೊಡುಗೆ ನೀಡಿದ್ದು, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳು ಜನಜೀವನದಲ್ಲಿ ಹೊಸ ಆಶಾಭರವಸೆ ಮೂಡಿಸಿವೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.  

ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಹಾಗೂ ಗದಗ-ಬೆಟಗೇರಿ ನಗರಸಭೆಯ 27ನೇ ವಾರ್ಡ್‌ ಸದಸ್ಯೆ ಶ್ರೀಮತಿ ಲಲಿತಾ ಬಿ. ಅಸೂಟಿ ಅವರ ನೇತೃತ್ವದಲ್ಲಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಆಲದ ಹಾಗೂ ಬೇವು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು.  

ಕಾರ್ಯಕ್ರಮದಲ್ಲಿ ಧರ್ಮಣ್ಣ ಹೊಸಮನಿ, ಬಸವರಾಜ್ ಹೊಸಮನಿ, ಗಣೇಶ್ ಹೊಸಮನಿ, ಮಾಂತೇಶ್ ಸೂಡಿ, ಶಿವಲಿಂಗಪ್ಪ ನೀಲಗಿ, ಅಂಗನವಾಡಿ ಕಾರ್ಯಕರ್ತೆ ಭಾರತಿ ಹುಣಸಿಕಟ್ಟಿ, ಅಂಗನವಾಡಿ ಸೂಪರ್ವೈಸರ್ ಶ್ರೀಮತಿ ವಿಜಯಲಕ್ಷ್ಮಿ ಹೊಸಮನಿ ಸೇರಿದಂತೆ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.