ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ರಾಯರ ಪಲ್ಲಕ್ಕಿ ಉತ್ಸವ ಆಚರಣೆ

   ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ರಾಯರ ಪಲ್ಲಕ್ಕಿ ಉತ್ಸವ ಆಚರಣೆ  Celebration of the Aradhana Mahotsava and Rayara Pallakki Utsava of Raghavendra Swamy

ಲೋಕದರ್ಶನ ವರದಿ 

ಕಂಪ್ಲಿ29;  ತಾಲೂಕು ರಾಮಸಾಗರ ಗ್ರಾಮದಲ್ಲಿ  ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವನ್ನು ವಿಜ್ಥಂಭಣೆಯಿಂದ ಆಚರಿಸಲಾಗುತ್ತಿದೆ.  ಗ್ರಾಮದಲ್ಲಿ ಈ ಇವತ್ತಿನಿಂದಲೂ 3ದಿನ ಆರಾಧನಾ ಮಹೋತ್ಷವವನ್ನು ಆಚರಿಸುಲಾಗುತ್ತಿದೆ 50ನೇ  ವರ್ಷದ  ಆರಾಧನಾ ಮಹೋತ್ಸವವು ಆಗಿರುತ್ತದೆ ಈ ವರ್ಷ ಮಹೋತ್ಸವವನ್ನು 29ರಿಂದ 31 ರವರೆಗೆ ವಿಶೇಷ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಪ್ರತಿದಿನ ಪಂಚಾಮೃತ, ಅಷ್ಟೋತ್ತರ, ಕಾರ್ಯಕ್ರಮಗಳೋಂದಿಗೆ ತೀರ್ಥ ಪ್ರಸಾದ ಇರುತ್ತದೆ. ಮಧ್ಯಾರಾದನೆಯ ಎರಡನೇ  ದಿನ ಪಂಡಿತ, ಕಾರ್ತಿಕ ಜೋಷಿ ,ಗಂಗಾವತಿ ಇವರಿಂದ ಪ್ರವಚನ , ಉತ್ತರಾಧನೆಯ ಮೂರನೇಯ ದಿವಸ ರಥೋತ್ಸವವನ್ನು  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬೆಳ್ಳಿಗ್ಗೆ ಪೂರ್ವಾರಾಧನೆಯ ಸಮಾರಂಭದಲ್ಲಿ , ಗ್ರಾಮದ ಮುಖ್ಯ ಬೀದಿಗಳಲ್ಲಿ  ಮಹಿಳಾ ಭಜನಾ ತಂಡದವರೊಂದಿಗೆ ರಾಯರ ಪಲ್ಲಕ್ಕಿ ಉತ್ಸವವನ್ನು  ದಾಸರ ಕೀರ್ತನೆಗಳೊಂದಿಗೆ ಭಕ್ತಿಭಾವಗಳಿಂದ ಆಚರಿಸಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರು, ಇಂದು ನಡೆದ ಆರಾಧನ ಮಹೋತ್ಸವದಲ್ಲಿ ಪಾಲ್ಗೋಂಡು ಆರಾಧನಾ ಮಹೋತ್ಸವವನ್ನು ಸಂಪನ್ನಗೊಳಿಸಿದರು.  ಇನ್ನೂ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಆಗಮಿಸಿ, ಕಾರ್ಯಕ್ರ,ಮವನ್ನು ಯಶ್ವಸಿಗೊಳಿಸಬೇಕೆಂದು ಭಕ್ತರಿಗೆ ರಾಘವೇಂದ್ರ ಸ್ವಾಮಿಗಳ ಅರ್ಚಕರಾದ ಸುಬ್ಬರಾವ್ ತಿಳಿಸಿದರು ಶ್ರೀಗುರುರಾಜ ಸೇವಾ ಮಂಡಳಿಯ ಅಧ್ಯಕ್ತರಾದ ಬಿ.ಆರ್‌.ಜಿ.ಭೀಮರಾವ್, ಖಜಾಂಚಿಗಳಾದ  ಗುತ್ತಿ ಕೃಷ್ಟಾಚಾರ್  ಸದಸ್ಯರಾದ ಎಂ ಅನಂತಚಾರ್ಯ ಆರ್ ರಾಮರಾವ್ ವಿ ನರಸಿಂಹ ಮೂರ್ತಿ ವೇಣುಗೋಪಾಲ್ ಅಚಾರ್ ಸೇವಾ ಮಂಡಳಿಯ ಎಲ್ಲಾ ಸದಸ್ಯರು ಭಕ್ತಾಧಿಗಳಲ್ಲಿ ಕೋರಿದ್ದಾರೆ.