ನೂಲಿ ಚೆನ್ನಯ್ಯ ಜಯಂತಿ ಆಚರಣೆ

ನೂಲಿ ಚೆನ್ನಯ್ಯ ಜಯಂತಿ ಆಚರಣೆ  Celebration of Nuli Chennayya Jayanti

ಲೋಕದರ್ಶನ ವರದಿ  

ಗುರ್ಲಾಪೂರ 29: ಪಟ್ಟಣದ ಪಿಎಂ ಶ್ರೀ ಶಾಸಕರ ಮಾದರಿ ಶಾಲಾ ಆವರಣದಲ್ಲಿ ನೂಲಿ ಚೆನ್ನಯ್ಯ ಅವರ ಜಯಂತಿಯನ್ನು ಶನಿವಾರ ಆಚರಿಸಲಾಯಿತು.  ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಎಲ್‌.ಪಿ. ನೇಮಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂಲಿ ಚೆನ್ನಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೂಲಿ ಚೆನ್ನಯ್ಯ ಅವರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಸತ್ಯ, ಶುದ್ಧ ಕಾಯಕದ ಮೂಲಕ ಜೀವನದಲ್ಲಿ ಅಳವಡಿಸಿಕೊಂಡ ಆದರ್ಶಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾಯಕದ ಮಹತ್ವವನ್ನು ಅರಿತು, ಶ್ರಮ ಹಾಗೂ ಪ್ರಾಮಾಣಿಕತೆಯಿಂದ ಬದುಕಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಸಸಾಲಟ್ಟಿ, ಶಿವಾನಂದ ಭಜಂತ್ರಿ, ಬಾಬು ಭಜಂತ್ರಿ, ಮಹಾದೇವ ಭಜಂತ್ರಿ, ಶಂಕರ ಭಜಂತ್ರಿ, ರಾಜು ಭಜಂತ್ರಿ, ಬಸೂ ಭಜಂತ್ರಿ, ಸಂಜು ಭಜಂತ್ರಿ, ಶ್ರೀಕಾಂತ ನಾಯಿಕ ಹಾಗೂ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಎಲ್‌.ಆರ್‌. ಸಾಲಿಮಠ ಸ್ವಾಗತಿಸಿದರು. ಶ್ರೀಮತಿ ಕವಿತಾ ಸೂರಣ್ಣವರ ನಿರೂಪಿಸಿ, ವಂದಿಸಿದರು.