‘ಕಂಡ ಚಂದ್ರ ಬಾವಿಯೊಳ್ ಸಂದನು’ ಚಿತ್ರಕ್ಕೆ ಕಲಾವಿದರ ಆಯ್ಕೆ

‘ಕಂಡ ಚಂದ್ರ ಬಾವಿಯೊಳ್ ಸಂದನು’ ಚಿತ್ರಕ್ಕೆ ಕಲಾವಿದರ ಆಯ್ಕೆ  Casting for the film ‘Kanda Chandra Baviyol Sandanu’


ಬಳ್ಳಾರಿ, ಸೆ. 2: ಗ್ರಾಮೀಣ ಸೊಗಡಿನ ಕಥಾಹಂದರ ಹೊಂದಿರುವ ‘ಕಂಡ ಚಂದ್ರ ಬಾವಿಯೊಳ್ ಸಂದನು’ ನೂತನ ಕನ್ನಡ ಚಲನಚಿತ್ರಕ್ಕೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸೆಪ್ಟೆಂಬರ್ 4ರಂದು ಶುಕ್ರವಾರ ಬಳ್ಳಾರಿ ನಗರದ ಮರ್ಚಾಡ್ ಹೋಟೆಲ್ ಸಭಾಂಗಣದಲ್ಲಿ ಕಲಾವಿದರ ಆಯ್ಕೆ ನಡೆಯಲಿದೆ.  

ಚಿತ್ರದಲ್ಲಿ ಅಭಿನಯಿಸಲು ಆಸಕ್ತಿ ಹೊಂದಿರುವ ಕಲಾವಿದರು ಹಾಗೂ ಬಾಲ ಪ್ರತಿಭೆಗಳಿಗೆ ಆಡಿಷನ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಬಳ್ಳಾರಿಯ ಕಲಾವಿದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಚಿತ್ರದ ನಿರ್ದೇಶಕ ನಾಗಪ್ಪ ಮನವಿ ಮಾಡಿದರು.  

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ವಿವಿಧ ವಯೋಮಾನದ ಪ್ರತಿಭಾವಂತರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.  

ಚಿತ್ರಕ್ಕಾಗಿ 6ರಿಂದ 14 ವರ್ಷದೊಳಗಿನ ಬಾಲ ಪ್ರತಿಭೆಗಳು, 18ರಿಂದ 25 ವರ್ಷದೊಳಗಿನ ಯುವಕರು ಹಾಗೂ ಯುವತಿಯರು ಮತ್ತು 30ರಿಂದ 60 ವರ್ಷದೊಳಗಿನ ಪುರುಷರು ಹಾಗೂ ಮಹಿಳೆಯರು ಆಡಿಷನ್ನಲ್ಲಿ ಭಾಗವಹಿಸಬಹುದು. ನಾಯಕ, ನಾಯಕಿ, ಖಳನಾಯಕ, ಹಾಸ್ಯನಟ, ಪೋಷಕ ನಟರು, ಮಹಿಳಾ ಪಾತ್ರಗಳು ಹಾಗೂ ಬಾಲ ನಟ ಸೇರಿದಂತೆ ವಿವಿಧ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯಲಿದೆ.  

ನಟನೆ ಬಗ್ಗೆ ಆಸಕ್ತಿ ಮತ್ತು ಪ್ರತಿಭೆ ಹೊಂದಿರುವವರು ಆಡಿಷನ್ನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ಅವಕಾಶ ಪಡೆದುಕೊಳ್ಳಬಹುದು ಎಂದು ನಾಗಪ್ಪ ತಿಳಿಸಿದರು.