ಯಮಕನಮರಡಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಯಮಕನಮರಡಿಯಲ್ಲಿ  ಸಿಸಿ ರಸ್ತೆ ಕಾಮಗಾರಿಗೆ ಚಾಲನೆ  CC road work launched in Yamakanamaradi


ಯಮಕನಮರಡಿ 06: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಕು. ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಮಕನಮರಡಿ ಗ್ರಾಮದಲ್ಲಿ ಅಂದಾಜು 1 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ನೀಡಿದರು.  

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕ ಫಲಾನುಭವಿಗಳಿಗೆ ವಿವಿಧ ಕಿಟ್ಗಳನ್ನು ವಿತರಿಸಲಾಯಿತು.  

ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಕಾರ್ಮಿಕರ ಕಲ್ಯಾಣಕ್ಕೂ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಲಾಯಿತು.  

ಈ ಸಂದರ್ಭದಲ್ಲಿ ಗುತ್ತಿಗೆದಾರ ಈರಣ್ಣ ಬಸಿರೊಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಶಂಕರ ಜುಟ್ಟಿ, ಕಿರಣಸಿಂಗ್ ರಜಪೂತ, ಸಿದ್ದಪ್ಪ ಶಿಳ್ಳಿ, ಕೆ.ಎಚ್‌. ಕರೆಹೊನ್ನ, ಶಾಂತಕುಮಾರ ಮಲಜಾ, ಚನ್ನಪ್ಪ ತಳವಾರ, ವಿಷ್ಣು ಬಡಿಗೇರ, ಶೇಖರ ಬಡಿಗೇರ, ಗುಲಾಬಸಿಂಗ್ ರಜಪೂತ, ಗೀರೀಶ್ ಮಿಶ್ರಿಕೋಟಿ, ಬರಮ ದುಬದಾಳಿ, ಓಂಕಾರ ತುಬಚಿ, ಶ್ರೀಮತಿ ಮಲಪ್ರಭಾ ಕಣಬರ್ಗಿ, ನಾರಾಯಣ ರಜಪೂತ ಹಾಗೂ ವಿಶ್ವನಾಥ ಜೀವಣ್ಣವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.