ಸಿ ಎಸ್ ನಾಡಗೌಡರವರಿಗೆ ತಾಲೂಕ ಮುಖಂಡರಿಂದ ಸನ್ಮಾನ
ಸಿ ಎಸ್ ನಾಡಗೌಡರವರಿಗೆ ತಾಲೂಕ ಮುಖಂಡರಿಂದ ಸನ್ಮಾನ
ಮುದ್ದೇಬಿಹಾಳ 14: ಪಟ್ಟಣದ ಎಪಿಎಂಸಿ ಬಡಾವಣೆಯಲ್ಲಿರುವ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಳ್ಳುವಲ್ಲಿ ಕಾರಣರಾಗಿರುವ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರಿಗೆ ತಾಲೂಕಿನ ಮುಖಂಡರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷ ಬಿ ಕೆ ಬಿರಾದಾರ, ಸಂತೋಷ ನಾಯಕ, ರಾಜು ನಾಯಕ, ಮನೋಹರ ಮೇಟಿ, ಬಾಪುಗೌಡ ಪೀರಾಪುರ, ರಾಜುಗೌಡ ಕೊಂಗಿ, ಬಸವರಾಜ ಇಸ್ಲಾಂಪೂರ ಸೇರಿದಂತೆ ಹಲವರು ಇದ್ದರು.