ಕನ್ನಡ ಲೇಖಕರ ಪುಸ್ತಕ ಕೊಂಡು ಓದಿ ಪ್ರೋತ್ಸಾಹಿಸಿ
Buy and read books by Kannada authors and encourage them
ಹೂವಿನ ಹಡಗಲಿ 26: ಕನ್ನಡದ ಹೆಸರಾಂತ ಲೇಖಕರ ಕೃತಿಗಳನ್ನು ಹೆಚ್ಚು ಓದಬೇಕು ಎಂದು ಶಾಸಕ ಎಲ್ ಕೃಷ್ಣನಾಯಕ ಅಭಿಮತ ವ್ಯಕ್ತಪಡಿಸಿದರು. ತಾಲೂಕಿನ ಕೊಯಲಾರಗಟ್ಟಿ ತಾಂಡದ ತಮ್ಮ ಸ್ವಗೃಹದಲ್ಲಿ ಕ್ರಿಸ್ಮಸ್ ಹಬ್ಬದ ದಿನ ಗೃಹ ಕಛೇರಿಯಲ್ಲಿ ಕಾಗನೂರು ಗ್ರಾಮದ ಬರಹಗಾರರಾದ ಲೇಖಕ ಗೌಡ್ರ ಶಿವಕುಮಾರ್ ಗೌಡ ರವರ "ಬಾಳಿನ ಪಯಣದ ನುಡಿಮುತ್ತುಗಳು", "ನಾ ಕಂಡ ಸಮಾಜ ಮತ್ತು ಸಮಸ್ಯೆಗಳು" "ಹೆಣ್ಣುಮಕ್ಕಳ ಕಷ್ಟಗಳು" ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.ಕವಿ ಲೇಖಕರು ತಮ್ಮ ಅನುಭವಗಳನ್ನು ಕೃತಿಗಳಲ್ಲಿ ವ್ಯಕ್ತಪಡಿಸುತ್ತಾರೆ. ಸಮಾಜದ ಓರೆಕೋರೆಗಳನ್ನು ಜನರಿಗೆ ತಲುಪಿಸುವಲ್ಲಿ ಸಹಕಾರಿಯಾಗಿವೆ.
ಗ್ರಾಮೀಣ ಪ್ರದೇಶದ ಯುವ ಕವಿ ಲೇಖಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು.ಸಮಾಜದ ವಾಸ್ತವ ಜ್ವಲಂತ ಸಮಸ್ಯೆಗಳು ಸಾಹಿತ್ಯದ ಕೃತಿಗಳಲ್ಲಿ ಅನಾವರಣಗೊಳಿಸುವ ನಿಟ್ಟಿನಲ್ಲಿ ಯುವ ಬರಹಗಾರರು ಯೋಚಿಸಬೇಕು. ಸಾಹಿತ್ಯಪರ ಸಂಘಟನೆಗಳು ಉದಯೋನ್ಮುಖ ಯುವ ಬರಹಗಾರರು ಕವಿಗಳು ಲೇಖಕರಿಗಾಗಿ ಕಮ್ಮಟಗಳು ಸಾಹಿತ್ಯದ ಶಿಬಿರಗಳನ್ನು ಏರಿ್ಡಸಿರಿ ಎಂದು ಸಲಹೆ ನೀಡಿದರು. ಲೇಖಕ ಶಿವಕುಮಾರ್ ಗೌಡ ತಮ್ಮ ಕೃತಿ ಹೊರಬರಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್ ಈ ಟಿ ಲಕ್ಷ್ಮಣ್, ಕೋಟೆಪ್ಪ, ದೀಪದ ಕೃಷ್ಣಪ್ಪ, ಮಂತ್ರೋಡಿ ವಿಶ್ವನಾಥ್, ಶಿವಪುತ್ರ್ಪ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 