ಮಾರ್ಗದಲ್ಲಿ ಮತ್ತೆ ಬಸ್ ಸಂಚಾರ

  ಮಾರ್ಗದಲ್ಲಿ ಮತ್ತೆ ಬಸ್ ಸಂಚಾರ  Bus services resume on the route

ಲೋಕದರ್ಶನ ವರದಿ 

ದಾಂಡೇಲಿ: ಪ್ರಧಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವೇಗಾಳಿ ಹಾಗೂ ಬಾಮಣಗಿ ಗ್ರಾಮದ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಸಾರಿಗೆ ಸಂಸ್ಥೆಯ ಬಸ್ ಸೇವೆ ಸೋಮವಾರದಿಂದ ಪುನರಾರಂಭಗೊಂಡಿದೆ.  ಬಸ್ ಸಂಚಾರ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಸಂತಸಗೊಂಡ ಗ್ರಾಮಸ್ಥರು ಬಸ್ಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮ ವ್ಯಕ್ತಪಡಿಸಿದರು.  ಹಲವು ದಿನಗಳಿಂದ ಈ ಮಾರ್ಗದಲ್ಲಿ ಬಸ್ ಸಂಚಾರ ಇಲ್ಲದ ಕಾರಣ ಗ್ರಾಮಗಳ ಶಾಲಾ ವಿದ್ಯಾರ್ಥಿಗಳು ದಾಂಡೇಲಿಗೆ ತೆರಳಿ ಬರಲು ತೊಂದರೆ ಅನುಭವಿಸುತ್ತಿದ್ದರು. ಗ್ರಾಮಸ್ಥರ ಸಮಸ್ಯೆಯನ್ನು ಅರಿತು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಗಾವಡ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಬಸ್ ಸೇವೆ ಪುನರಾರಂಭಕ್ಕೆ ಪ್ರಯತ್ನಿಸಿದ್ದರು. ಅವರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಇದೀಗ ಬಸ್ ಸಂಚಾರವನ್ನು ಪುನರಾರಂಭಿಸಿದ್ದಾರೆ.