ರಸ್ತೆ ಮಧ್ಯದಲ್ಲಿ ಕೆಟ್ಟು ನಿಲ್ಲುವ ಬಸ್ ಸರ್ಕಾರದ ಮೂರನೇ ವರ್ಷದ ಸಾಧನಾ ಸಮಾವೇಶ

ರಸ್ತೆ ಮಧ್ಯದಲ್ಲಿ ಕೆಟ್ಟು ನಿಲ್ಲುವ ಬಸ್ ಸರ್ಕಾರದ ಮೂರನೇ ವರ್ಷದ ಸಾಧನಾ ಸಮಾವೇಶ   Bus breaks down in the middle of the road, government's third annual training conference

ಲೋಕದರ್ಶನ ವರದಿ 

ಲಕ್ಷ್ಮೇಶ್ವರ"  19: ಎಲ್ಲೆಂದರಲ್ಲಿ ರಸ್ತೆಯ ಮಧ್ಯದಲ್ಲಿ ಕೆಟ್ಟ ನಿಲುವ ಬಸ್ ಸಾರ್ವಜನಿಕ ಪ್ರಯಾಣಿಕರ ಅನುಭವಿ ಸುತ್ತಿರುವುದು ಒಂದು ಕಡೆಯಾದರೆ ತುಮಕೂರಲ್ಲಿ ಸರಕಾರದ ಮೂರನೇ ವರ್ಷದ ಸಾಧನಾ ಸಮಾವೇಶ ನೋಡಿ ತಾಲೂಕಿನ ಪುಟಗಾವ್ ಬಡ್ಡಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಲಕ್ಷ್ಮೇಶ್ವರ ಘಟಕಕ್ಕೆ ಸೇರಿದ ಬಸ್ ಒಂದು ಕೆಟ್ಟು ನಿಂತ ಘಟನೆ ಮಂಗಳವಾರ ಮಧ್ಯಾನ ನಡೆದಿದೆ ಸರಕಾರ 5 ಗ್ಯಾರಂಟಿ ನೀಡಿ ನುಡಿದಂತೆ ನಡೆದ ಸರ್ಕಾರ ಎಂದು ಐದನೇ ವರ್ಷದ ಸಾಧನಾ ಸಮಾವೇಶ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬ ಚರ್ಚೆ ಸಾರ್ವಜನಿಕ ಪ್ರಯಾಣಿಕರಲ್ಲಿ ಕೇಳಿ ಬರುತ್ತಿದೆ. 

 ಐದು ಗ್ಯಾರಂಟಿ ಯೊಂದಿಗೆ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡುತ್ತಿದೆ ಆದರೆ ಇದರಿಂದ ಮಹಿಳೆಯರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗುತ್ತಿದೆ ಎಂದು ದಿನ ನಿತ್ಯ ಪ್ರಯಾಣಿಕರಿಂದ ಕೇಳಿ ಬರುತ್ತಿದೆ ಮಹಿಳೆಯರಿಗೆ ಉಚಿತ ಬಸ್ ಸೇವೆ ಪ್ರಾರಂಭಿಸಿದ ಸರ್ಕಾರ ಇದರಿಂದ ಮಹಿಳೆಯರ ಪ್ರಯಾಣ ಹೆಚ್ಚಾಗುತ್ತಿದೆ ವಿನಹ ಬಸ್ ಸಂಖ್ಯೆ ಹೆಚ್ಚಾಗುತ್ತಿಲ್ಲ ಅದರಲ್ಲಿ ಇರುವ ಹಳೆ ಬಸ್ ಗಳನ್ನು ಓಡಿಸುತ್ತಿದ್ದಾರೆ.

ಆದರೆ ಅಂತ ಬಸ್ ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ ಇದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಉಚಿತ ಬಸ್ ಪ್ರಯಾಣ ಸೇವೆ ನೀಡಿರುವ ಸರ್ಕಾರ ಹೆಚ್ಚು ಬಸ್ ಗಳನ್ನು ಪೂರೈಸದೆ ಇರುವ ಬಸ್ ಗಳಿಗೆ ಸೂಕ್ತ ನಿರ್ವಹಣೆ ಇಲ್ಲದೆ ಪ್ರಯಾಣಿಕರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿರುವುದನ್ನು ಪರಿಗಣಿಸದ ಸರ್ಕಾರ ಮೂರನೇ ವರ್ಷದ ಸಾಧನಾ ಸಮಾವೇಶ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬ ಚರ್ಚೆಗಳು ಸಾರ್ವಜನಿಕ ಪ್ರಯಾಣಿಕರ ವಲಯದಲ್ಲಿ ಕೇಳಿ ಬರುತ್ತಿದೆ