ಬೆಳಗಾವಿಗೆ ಬರ್ಗರ್ ಕಿಂಗ್ ಪ್ರವೇಶ
Burger King opens first restaurant in Belgaum city
ಲೋಕದರ್ಶನ ವರದಿ
ಬೆಳಗಾವಿ 05: ಅತ್ಯಂತ ಪ್ರತಿಷ್ಠಿತ ಬರ್ಗರ್ ಕಿಂಗ್ ಇಂಡಿಯಾ ಅಧಿಕೃತವಾಗಿ ಬೆಳಗಾವಿ ನಗರಕ್ಕೆ ಪಾದಾರೆ್ಣ ಮಾಡಿದ್ದು, ನಗರದಲ್ಲಿ ತನ್ನ ಚೊಚ್ಚಲ ರೆಸ್ಟೋರೆಂಟ್ ಪ್ರಾರಂಭಿಸಿದೆ. ಇದು ಕರ್ನಾಟಕದಾದ್ಯಂತ ಬ್ರ್ಯಾಂಡ್ ನ ವಿಸ್ತರಣಾ ಪ್ರಯಾಣದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಈ ಹೊಸ ಶಾಖೆಯ ಪ್ರಾರಂಭದೊಂದಿಗೆ, ಬರ್ಗರ್ ಕಿಂಗ್ ಕರ್ನಾಟಕದಲ್ಲಿ 60 ರೆಸ್ಟೋರೆಂಟ್‌ಗಳ ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ಅಲ್ಲದೆ, ಭಾರತದಾದ್ಯಂತ ಒಟ್ಟು 579 ರೆಸ್ಟೋರೆಂಟ್‌ಗಳನ್ನು ಹೊಂದುವ ಮೂಲಕ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಬರ್ಗರ್ ಕಿಂಗ್, ಈಗ ತನ್ನ ವಿಶಿಷ್ಟವಾದ ’ಫ್ಲೇಮ್- ಗ್ರಿಲ್ಡ್ ಹಾಪರ್ಸ’ ಮತ್ತು ಇತ್ಯಾದಿ ಖಾದ್ಯಗಳ ಸ್ವಾದಿಷ್ಟ ರುಚಿಯನ್ನು ಬೆಳಗಾವಿಗೆ ಪರಿಚಯಿಸಿದ್ದು, ಇದು ನಗರದ ಜನರಿಗೆ ಕ್ಯಾಶುಯಲ್ ಡೈನಿಂಗ್, ಸ್ನೇಹಿತರ ಭೇಟಿ ಮತ್ತು ದೈನಂದಿನ ರುಚಿಕರ ಆಹಾರ ಸವಿಯಲು ಆಕರ್ಷಕವಾದ ಹೊಸ ತಾಣವಾಗಲಿದೆ.
ಸ್ಥಳೀಯ ಮಂದಿಗೆ ಬಾಗಿಲು ತೆರೆಯುವ ಮೂಲಕ ಬ್ರ್ಯಂಡ್ ಅತ್ಯಂತ ಆಕರ್ಷಕವಾಗಿ ಮತ್ತು ಆತ್ಮೀಯ ವಾತಾವರಣದ ಮೂಲಕ ಈ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿದೆ. ಕ್ರಿಯಾಶೀಲ ಮತ್ತು ಆಧುನಿಕ ಶೈಲಿಯಲ್ಲಿ ವಿನ್ಯಾಸಗೊಳಿಸಲಾದ ಈ ರೆಸ್ಟೋರೆಂಟ್, ಕುಟುಂಬಗಳು, ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರು ಒಟ್ಟಾಗಿ ಸೇರಿ ಉತ್ತಮ ಆಹಾರ ಆನಂದಿಸುತ್ತಾ ಸವಿನೆನಪುಗಳನ್ನು ಸೃಷ್ಟಿಸಿಕೊಳ್ಳುವಂತಹ ಪರಿಸರ ನಿರ್ಮಿಸುವ ಬರ್ಗರ್ ಕಿಂಗ್ ನ ಗುರಿಯನ್ನು ಪ್ರತಿಬಿಂಬಿಸುತ್ತದೆ.
ಈ ಸಂದರ್ಭದಲ್ಲಿ ಈ ರೆಸ್ಟೋರೆಂಟ್ ಕುರಿತು ಮಾತನಾಡಿದ ಬರ್ಗರ್ ಕಿಂಗ್ ಇಂಡಿಯಾದ ಚೀಫ್ ಮಾರ್ಕೆಟಿಂಗ್ ಆಫೀಸರ್ ಕಪಿಲ್ ಗ್ರೋವರ್, "ಬೆಳಗಾವಿಯು ಕ್ರಿಯಾಶೀಲ ಯುವ ಸಂಸ್ಕೃತಿ ಮತ್ತು ಬೆಳೆಯುತ್ತಿರುವ ಆಹಾರದ ಆದ್ಯತೆಗಳನ್ನು ಹೊಂದಿರುವ ಬೆಳೆಯುತ್ತಿರುವ ನಗರವಾಗಿದೆ. ಬೆಳಗಾವಿಗೆ ಮೊದಲ ಬಾರಿಗೆ ಬರ್ಗರ್ ಕಿಂಗ್ ಅನ್ನು ತರುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಈ ರೆಸ್ಟೋರೆಂಟ್ ರಾಜ್ಯದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ತಲುಪಿದಂತಾಗಿದೆ. ನಮ್ಮ ವಿಶಿಷ್ಟವಾದ ’ಫ್ಲೇಮ್- ಗ್ರಿಲ್ಡ್’ ರುಚಿ, ಕೈಗೆಟುಕುವ ದರ ಮತ್ತು ಅತ್ಯುತ್ತಮ ಡಿಜಿಟಲ್ ಅನುಭವದೊಂದಿಗೆ ಬೆಳಗಾವಿಯ ಗ್ರಾಹಕರಿಗೆ ಸೇವೆ ನೀಡಲು ನಾವು ಉತ್ಸುಕರಾಗಿದ್ದೇವೆ" ಎಂದು ಹೇಳಿದರು.
ಬೆಳಗಾವಿಯ ಹೊಸ ರೆಸ್ಟೋರೆಂಟ್ ನಲ್ಲಿ ಗ್ರಾಹಕರು ಬರ್ಗರ್ ಕಿಂಗ್ ನ ಜನಪ್ರಿಯ ಹಾಪರ್‌ಎ ಡಿಲಕ್ಸ್ ಸರಣಿಯ ಖಾದ್ಯವನ್ನು ಸವಿಯಬಹುದು.
ಅನುಭವಕ್ಕೆ ಮತ್ತಷ್ಟು ಸೊಗಸು ನೀಡಲು ಇಲ್ಲಿ ಬರ್ಗರ್ ಕಿಂಗ್ ಕೆಫೆ ಇದೆ. ಇಲ್ಲಿ ಪ್ರೀಮಿಯಂ ಅರೆಬಿಕಾ ಬೀಜಗಳಿಂದ ತಯಾರಿಸಿದ ಬರಿಸ್ಟಾ- ಶೈಲಿಯ ಬಿಸಿ ಮತ್ತು ಕೋಲ್ಡ್ ಕಾಫಿಗಳು ಲಭ್ಯವಿವೆ. ಗ್ರಾಹಕರು ರುಚಿಕರವಾದ ಹಾಟ್ ಚಾಕೊಲೇಟ್, ಮಸಾಲಾ ಚಾಯ್, ಕ್ಲಾಸಿಕ್ ಕೋಲ್ಡ್ ಕಾಫಿ ಮತ್ತು ಬರ್ಗರ್ ಕಿಂಗ್ ನ ಐಕಾನಿಕ್ ಥಿಕ್ ಶೇಕ್ ಗಳಾದ ಮ್ಯಾಂಗೋ, ಚಾಕೊಲೇಟ್ ಮತ್ತು ಬೆರ್ರಿ ಬ್ಲಾಸ್ಟ್ ಫ್ಲೇವರ್ ಗಳನ್ನು ಸವಿಯಬಹುದು. ಇದು ಲಘು ವಿರಾಮ ಮತ್ತು ದೀರ್ಘ ಸಂಭಾಷಣೆಗಳಿಗೆ ಸೂಕ್ತವಾದ ತಾಣವಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ’ಕೊರಿಯನ್ ರೇಂಜ್’ ಅಭೂತಪೂರ್ವ ಯಶಸ್ಸನ್ನು ಕಂಡಿದ್ದು, ಅಪ್ಪಟ ಕೊರಿಯನ್ ಸ್ವಾದ ಮತ್ತು ಎಲ್ಲಾ ವಯೋಮಾನದವರನ್ನು ಸೆಳೆಯುವಂತಹ ಮಸಾಲೆ ಭರಿತ ರುಚಿಯಿಂದಾಗಿ ಜನಪ್ರಿಯವಾಗಿದೆ. ಕೊರಿಯನ್ ಸ್ಪೈಸಿ ಚಿಕನ್ ಮತ್ತು ಕೊರಿಯನ್ ಪನೀರ್ ಬರ್ಗರ್ ಗಳಿಂದ ಹಿಡಿದು, ಕೊರಿಯನ್ ಫ್ರೈಸ್ ಮತ್ತು ಸ್ಪೈಸಿ ಕೊರಿಯನ್ ವಿಂಗ್ಸ್ ವರೆಗೆ, ಈ ಸರಣಿಯು ಅಂತರಾಷ್ಟ್ರೀಯ ರುಚಿಯನ್ನು ಭಾರತೀಯ ಗ್ರಾಹಕರು ಇಷ್ಟಪಡುವ ರೀತಿಯಲ್ಲಿ ನೀಡುವ ಬ್ರ್ಯಂಡ್ ನ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 