ಸ್ವ ಉದ್ಯಮದಿಂದ ಸಮೃದ್ಧ ಬದುಕು ಕಟ್ಟಿಕೊಳ್ಳಿ: ಹಿರಿಯ ಪತ್ರಕರ್ತ ಮೇಟಿ
ಲೋಕದರ್ಶನ ವರದಿ
ಶಿರಹಟ್ಟಿ 24: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಗುಣಮಟ್ಟದ ಶಿಕ್ಷಣ ಪಡೆದರು, ಸರ್ಕಾರಿ ಉದ್ಯೋಗ ಸಿಗುವುದು ವಿರಳ. ಹೀಗಾಗಿ ಯುವ ಸಮೋಹವು ಸ್ವ ಉದ್ಯಮದತ್ತ ಮುಖ ಮಾಡುವುದರ ಮೂಲಕ ಸಮೃದ್ಧ ಬದುಕಿಗೆ ಮುನ್ನುಡಿ ಬರೆಯಬೇಕು ಎಂದು ಹಿರಿಯ ಪತ್ರಕರ್ತ ಪ್ರಕಾಶ ಮೇಟಿ ಹೇಳಿದರು.
ಅವರು ಸ್ಥಳೀಯ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯಲ್ಲಿ ಗುರುವಾರ ನಡೆದ ಅಂಗವಿಕಲರ ಉಚಿತ ಕಂಪ್ಯೂಟರ್ ತರಬೇತಿಯ ಕೊನೆಯ ದಿನದ ಕಾರ್ಯಕ್ರಮ ಹಾಗೂ ಕೌಶಲ್ಯ ಉದ್ಯೋಗ ಔಟ್ರೀಚ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಂದು ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಉದ್ಯಮಶೀಲತೆ ಬಹು ಮುಖ್ಯ ಪಾತ್ರವಹಿಸುತ್ತದೆ. ಹೀಗಾಗಿ ಸರ್ವರೂ ಸ್ವ ಉದ್ಯೋಗದತ್ತ ಆಸಕ್ತಿ ಬೆಳಸಿಕೊಳ್ಳುವುದರ ಮೂಲಕ ಸ್ವಾವಲಂಬಿಗಳಾಗಿ ಬದುಕು ಸಾಗಿಸಬೇಕು. ಅಲ್ಲದೇ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಏನನ್ನಾರೂ ಸಾಧಿಸಬೇಕು ಎಂಬ ಛಲ, ಕನಸ್ಸು, ನಂಬಿಕೆ ಹಾಗೂ ದೃಢ ನಿರ್ಧಾರಗಳನ್ನು ತಗೆದುಕೊಂಡು ಆತ್ಮಸ್ಥೈರ್ಯ ಹಾಗೂ ಕಠಿಣ ಪರಿಶ್ರಮದ ಮೂಲಕ ಕೆಲಸ ಮಾಡಿದರೆ ಮಾತ್ರ ಜೀವನದಲ್ಲಿ ಉನ್ನತ ಸ್ಥಾನ ಹಾಗೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಶಿಬಿರಾರ್ಥಿಗಳು ಸ್ವ ಉದ್ಯಮದಲ್ಲಿ ಸಹನೆ, ತಾಳ್ಮೆ ಹಾಗೂ ಸೇವಾ ಮನೋಭಾವವನ್ನು ಬೆಳಸಿಕೊಳ್ಳುವುದರ ಮೂಲಕ ಒಬ್ಬ ಯಶಸ್ವಿ ಉದ್ಯಮಿಗಳಾಗಿ ಬೆಳೆಯಬೇಕು ಎಂದು ಹೇಳಿದರು.
ನಂತರ ಸಂಪನ್ಮೂಲ ವ್ಯಕ್ತಿ ಬಸವರಾಜ ಸಂಗಪ್ಪಶಟ್ಟರ ಮಾತನಾಡಿ. ದೇಶ ಆರ್ಥಿಕವಾಗಿ ಸದೃಡವಾಗಬೇಕಾದರೆ ಉದ್ಯಮಶೀಲತೆ ಬಹಳ ಅವಶ್ಯ. ಹೀಗಾಗಿ ಯುವ ಜನಾಂಗ ಶಿಕ್ಷಣದ ಜೊತೆಗೆ ಸ್ವ ಉದ್ಯೋಗ ಮಾಡುವ ಹವ್ಯಾಸ ಬೆಳಸಿಕೊಳ್ಳಬೇಕು. ಸ್ವ ಉದ್ಯಮದಲ್ಲಿ ಲಾಭ-ನಷ್ಟಗಳು ಸಾಮಾನ್ಯ. ಆದ್ರಿಂದ ತರಬೇತಿ ಸಂಸ್ಥೆಗಳ ಮೂಲಕ ಹೆಚ್ಚಿನ ಜ್ಞಾನ ಪಡೆದು, ಒಬ್ಬ ಯಶಸ್ವಿ ಉದ್ಯಮಿಯಾಗಿ, ಸಮಾಜಕ್ಕೆ ಕೊಡುಗೆ ನೀಡುವುದರ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ಕಲ್ಪಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸರೆ ಸಂಸ್ಥೆಯ ಕಾರ್ಯದರ್ಶಿ ಶಶಿಧರ ಶಿರಸಂಗಿ, ಕೌಶಲ್ಯ ಉದ್ಯೋಗ ಔಟ್ರೀಚ್ ತರಬೇತಿಯ ಸಂಯೋಜಕ ಪಿ.ಎನ್. ವದರಿ, ಹಾಗೂ ಮಂಜುನಾಥ ಮುಳಗುಂದ, ಖಲೀಲಹ್ಮದ ಶೇಖ, ಸುಜಾತ ದೊಡ್ಡುರ, ಸಿದ್ದಪ್ಪ ಹೂಗಾರ, ಹಸನಸಾಬ ಕಿಲ್ಲೇದಾರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 