"ಮನುಷ್ಯ ಸಮಾನತೆಯನ್ನು ಬೋಧಿಸಿದ ಏಕೈಕ ಧರ್ಮ ಬುದ್ಧ ಧರ್ಮ"
ಕಾರವಾರದಲ್ಲಿ ಬುದ್ಧಪೂರ್ಣಿಮೆ ಆಚರಣೆ :
ಕಾರವಾರ 01: ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆ ಆಶ್ರಯದಲ್ಲಿ ಶುಕ್ರವಾರ ಬುದ್ಧಪೂರ್ಣಿಮೆಯನ್ನು ಆಚರಿಸಲಾಯಿತು.
ನಗರದ ಕಾಜುಬಾಗದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ಬುದ್ಧನ ಪ್ರತಿಮೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರು ಮಾಲಾರೆ್ಣ ಮಾಡಿದರು. ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಷಾ ಎಲಕಪಾಟಿ ಬುದ್ಧನ ಪ್ರತಿಮೆಗೆ ಮಾಲಾರೆ್ಣ ಮಾಡಿದರು. ಗೌತಮ ಬುದ್ಧನ ಜನನ, ಬೋಧಿ ಮತ್ತು ಮಹಾಪರಿನಿರ್ವಾಣ ಸ್ಮರಣೆಗಾಗಿ ಬುದ್ಧಪೂರ್ಣಿಮೆಯನ್ನು ಆಚರಿಸಲಾ ಗುತ್ತದೆ ಎಂದರು. ಗೌತಮ ಬುದ್ಧ ನಮಗೆ ಆದರ್ಶ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಕೊನೆಯ ಜೀವಿತಾವಧಿಯಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದರು. ಬುದ್ಧನ ಆದರ್ಶಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅನುಸರಿಸಿದರು. ಬುದ್ದ ಧರ್ಮ ಸಮಾನತೆಯನ್ನು ಸಾರುತ್ತದೆ ಎಂದರು. ಶಾಂತಿ, ಕರುಣೆ ಮತ್ತು ಜ್ಞಾನಕ್ಕಾಗಿ ಧ್ಯಾನ ಮಾಡಬೇಕು. ಬುದ್ಧನ ಉಪದೇಶಗಳನ್ನು ಕೇಳುವುದು ಮತ್ತು ಚರ್ಚೆ ಮಾಡುವುದು.
ವೇದಿಕೆ ಮೇಲೆ ಮೆಹಬೂಬ್ ಇನಾಮದಾರ, ಮಾಲತೇಶ ಲಮಾಣಿ, ರಮಕಾಂತ ಗುನಗಿ, ರೂಪೇಶ ಗುನಗಿ, ಬೀದಿಬದಿ ವ್ಯಾಪಾರಸ್ಥರ ಸಂಘದ ಕಾರವಾರ ತಾಲೂಕು ಅಧ್ಯಕ್ಷ ಅಬ್ಬಾಸ್, ಪ್ರಸಾದ ಹುಲಸ್ವಾರ ಮತ್ತಿತರರು ಹಾಜರಿದ್ದರು.