ಮಜಲಟ್ಟಿಯಲ್ಲಿ ರಕ್ತದಾನ ಶಿಬಿರ
Blood donation camp in Majalatti
ಮಾಂಜರಿ 13: ಗ್ರಾಮೀಣ ಪ್ರಗತಿ ಶಿಕ್ಷಣ ಸಂಸ್ಥೆ ಮಜಲಟ್ಟಿ, ಅಂಕುರ ಬ್ಲಡ್ ಬ್ಯಾಂಕ್ ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಸಹಕಾರಿ ಧುರೀಣ ಸಾಮಾಜಿಕ ಹೋರಾಟಗಾರರಾಗಿದ್ದ ದಿವಂಗತ ಬಿ ಆರ್ ಸಂಗಪ್ಪಗೋಳ ಅವರ 82ನೇ ಜನ್ಮದಿನಾಚರಣೆ ಅಂಗವಾಗಿ ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿನ ಬಿ ಆರ್ ಎಸ್ ನಸಿಂರ್ಗ್ ಕಾಲೆಜ್ ನಲ್ಲಿ ಮಂಗಳವಾರ ರಕ್ತದಾನ ಶಿಬಿರವನ್ನು ಆಯೋಸಲಾಗಿತ್ತು
ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ವಿಜಯ ಸಂಗಪ್ಪಗೋಳ ಮಾತನಾಡಿ ಗ್ರಾಮೀಣ ಬಾಗದ ಯುವಕರಲ್ಲಿ ರಕ್ತ ದಾನ ಜಾಗ್ರತೆ ಮೂಡಿಸುವಲ್ಲಿ ಶಿಬಿರವನ್ನು ಆಯೋಜಿಸಿದ್ದು ರಕ್ತದಾನ ಮಾಡುವುದರಿಂದ ಇತರರ ಜೀವ ಉಳಿಸುವುದರ ಜೊತೆಗೆ, ಹೃದಯದ ಆರೋಗ್ಯ ಸುಧಾರಿಸುತ್ತದೆ, ಕಬ್ಬಿಣದ ಮಟ್ಟ ಸಮತೋಲನಗೊಳ್ಳುತ್ತದೆ, ಹೊಸ ರಕ್ತ ಕಣಗಳ ಉತ್ಪತ್ತಿಗೆ ಉತ್ತೇಜನ ನೀಡುತ್ತದೆ ಮತ್ತು ಒತ್ತಡ ಕಡಿಮೆ ಮಾಡಿ ಮಾನಸಿಕವಾಗಿ ಸಂತೃಪ್ತಿ ನೀಡುತ್ತದೆ ಎಂದು ಹೇಳಿದರು.
ಅತಿಥಿಯಾಗಿ ಮಾತನಾಡಿದ ಚಿಕ್ಕೋಡಿ ಲೋಕಸಭಾ ಸದಸ್ಯರ ಅಪ್ತಸಹಾಯಕ ರಾಮಕೃಷ್ಣ ಪಾನಬುಡೆ ಒಂದು ರಕ್ತದಾನದಿಂದ ಮೂರು ಜನರ ಜೀವಗಳನ್ನು ಉಳಿಸಬಹುದು ರಕ್ತದಾನ ಮಾಡಿದ ನಂತರ ದೇಹವು ಹೊಸ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ ಇದು ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಎಂದರು. ರಕ್ತದಾನ ಮಾಡಿದ ಸುಮಾರು ನಲವತ್ತಕೂ ಹೆಚ್ಚು ಯುವಕರಿಗೆ ಹೆಲ್ಮೆಟ್‌ಗಳನ್ನು ಉಚಿತವಾಗಿ ನೀಡಲಾಯಿತು.
ಸಾಹಿತಿ ಎಸ್ ವಾಯ್ ಹಂಜಿ ಪ್ರಾಚಾರ್ಯ ದುಂಡಪ್ಪ ಮಾನೆಪ್ಪಗೋಳ ಸಂಸ್ಥೆಯ ಅದ್ಯಕ್ಷ ರುದ್ರ್ಪ ಸಂಗಪ್ಪಗೋಳ ವೀರಭದ್ರ ಸಂಗಪ್ಪಗೋಳ ಅಪ್ಪಣ್ಣ ನಾಯಿಕ ಶ್ರೀಧರ ಪಾಟೀಲ ಅಪ್ಪಾಸಾಹೇಬ ಸನದಿ ಅರವಿಂದ ಮಾದರ ಶ್ರೀಕಾಂತ ಬೆಂಡವಾಡೆ ಸುಭಾಷ ಕರೋಲಿ ಸ್ವಪ್ನಿಲ್ ಪಾಟೀಲ ಶೃತಿ ವಿಜಯ ಸಂಗಪ್ಪಗೋಳ ಕವಿತಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 