ದ್ವಿಭಾಷಾ ನೀತಿಯಿಂದ ಕನ್ನಡಕ್ಕೆ ಪರೋಕ್ಷವಾಗಿ ಅನ್ಯಾಯ: ಮಯೂರ ತಳಗುಳಕರ್
ಲೋಕದರ್ಶನ ವರದಿ
ವಿಜಯಪುರ, ಆ.30: ಸರ್ಕಾರದ ದ್ವಿಭಾಷಾ ನೀತಿಯಿಂದ ಕನ್ನಡ ಭಾಷೆಯನ್ನು ಪರೋಕ್ಷವಾಗಿ ನಿರ್ಲಕ್ಷಿಸಿ, ಇಂಗ್ಲಿಷ್ ಭಾಷೆಯ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಮಯೂರ ತಳಗುಳಕರ್ ಹೇಳಿದರು.
ನಗರದ ದರ್ಬಾರ್ ಸಭಾಭವನದಲ್ಲಿ ಭಾನುವಾರ ನಡೆದ ಗುರುಪೂರ್ಣಿಮಾ ಮಹೋತ್ಸವ ಹಾಗೂ ‘ಕನ್ನಡ ಉಳಿಸಿ’ ಉಪನ್ಯಾಸ ಮಾಲಿಕೆ ಮತ್ತು ಜಿಲ್ಲಾ ಯುವಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದ್ವಿಭಾಷಾ ನೀತಿಯಿಂದ ಕನ್ನಡ ಭಾಷೆಯ ಮೇಲಾಗುತ್ತಿರುವ ಪರಿಣಾಮಗಳ ಕುರಿತು ವಿವರಿಸಿದರು.
ಭಾರತೀಯ ಸಾಹಿತ್ಯವನ್ನು ಒಂದು ತೂಕವೆಂದು ಪರಿಗಣಿಸಿದರೆ, ವೇದವ್ಯಾಸರ ಸಾಹಿತ್ಯ ಮತ್ತೊಂದು ತೂಕಕ್ಕೆ ಸಮಾನವಾಗಿದೆ ಎಂದು ಹೇಳಿದ ಅವರು, ವೇದವ್ಯಾಸರ ಸಾಹಿತ್ಯದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಯುವಗೋಷ್ಠಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕ ಕುಲಕರ್ಣಿ ವಹಿಸಿದ್ದರು. ನಿರೂಪಣೆಯನ್ನು ರಾಹುಲ್ ಮರಳಿ, ಪ್ರಾರ್ಥನೆಯನ್ನು ಸೌಮ್ಯ ಕುಲಕರ್ಣಿ ಹಾಗೂ ವಂದನೆಯನ್ನು ಅನಿಲ್ ಬಳುಂಡಗಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ನಾರಾಯಣ ಬಾಬಾನಗರ, ಸುಕಾಂತ ಕುಲಕರ್ಣಿ, ಶ್ರೀರಂಗ ಪುರಾಣಿಕ, ಸತೀಶ ಮಣ್ಣೂರ, ಶಾಂಭವಿ ಕುಲಕರ್ಣಿ, ದಾನೇಶ್ವರಿ ಆಲಾಳೆ, ಸೋನು ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.