ಸಮುದಾಯ ನಿರ್ಮಾಣಕ್ಕಾಗಿ ಭೂಮಿ ಪೂಜೆ
Bhoomi Puja for community building
ಲೋಕದರ್ಶನ ವರದಿ
ಸಿಂದಗಿ 24; ಕೃಷಿ ಮಾರುಕಟ್ಟೆಯ ವರ್ತಕರ ಬಹುದಿನಗಳ ಬೇಡಿಕೆಯಾದ ಸಮೂದಾಯ ಭವನಕ್ಕೆ ಅನುದಾನ ಕಲ್ಪಿಸಿ ರೈತರಿಗೆ ಅನುವು ಮಾಡಿದ ಶಾಸಕ ಅಶೋಕ ಮನಗೂಳಿ ಅವರು ನುಡಿದಂತೆ ನಡೆದುಕೊಂಡಿದ್ದಾರೆ ಅವರ ಬೆಂಬಲಕ್ಕೆ ಸದಾ ಇರುತ್ತೇವೆ ಎಂದು ಗಣ್ಯ ವರ್ತಕ ಬಸವರಾಜ ಶಹಾಪುರ ಹೇಳಿದರು.
ನಗರದ ಎಪಿಎಂಸಿ ಶ್ರೀ ಗಣಪತಿ ದೇವಸ್ಥಾನದ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯ 2025-26 ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಮುದಾಯ ನಿರ್ಮಾಣಕ್ಕಾಗಿ ಮಂಜೂರಾದ ರೂ 25 ಲಕ್ಷ ಮೊತ್ತದ ಕಾಮಗಾರಿಗೆ ಭೂಮಿ ಪೂಜೆ ಸಮಾರಂಭದಲ್ಲಿ ಮಾತನಾಡಿದರು.
ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ದೇವಸ್ಥಾನದ ಸಮಿತಿಯವರು ನೀಡಿರುವ ಸನ್ಮಾನವನ್ನು ಸ್ವೀಕರಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಶೀಘ್ರದಲ್ಲಿ ಕಟ್ಟಡ ಪ್ರಾರಂಭಗೊಳ್ಳಲಿದೆ ಅದರ ಉದ್ಘಾಟನಾ ಸಮಾರಂಭದಲ್ಲಿ ವಿವರವಾಗಿ ಮಾತನಾಡುವೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಅಭಿಯಂತರ ಸುನೀಲಗೌಡ ಪಾಟೀಲ, ಎಪಿಎಂಸಿ ಗಣ್ಯ ವ್ಯಾಪಾರಸ್ಥರು,ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ಬಿಸಾನಾಳ,ಉಪಾಧ್ಯಕ್ಷ ಬಸವರಾಜ್ ಮಾರಲಭಾವಿ ಸದಸ್ಯರಾದ ಬಸಯ್ಯ ಹಿರೇಮಠ್, ಸಂಗಯ್ಯ ಹಿರೇಮಠ್, ಗಣ್ಯ ವರ್ತಕರಾದ ಮಾಹಾದೇವಪ್ಪ ಮುಂಡೇವಾಡಗಿ, ಉಮೇಶ ಜೋಗುರ, ಶರಣಯ್ಯ ಮಠ, ಆರ್. ಆಯ್. ಸಾವಳಗಿ, ಅಶೋಕ ವಾರದ, ಬಸವರಾಜ ಶಾಹಾಪುರ, ಮುತ್ತು ಮುಂಡೇವಾಡಗಿ, ಅಶೋಕ ಕೊಳಾರಿ, ರವಿ ನಾವಿ, ಸುರೇಶ ಚೌದರಿ, ಶಾಂತು ರಾಣಾಗೋಳ, ರಾಜು ಕುಲಕರ್ಣಿ, ನಾರಾಯಣ ಕುಲಕರ್ಣಿ ಬಾಬು ಕಮತಗಿ, ಅಶೋಕ ತೆಗ್ಗೆಳ್ಳಿ ಸೇರಿದಂತೆ ಹಿರಿಯ ಮುಖಂಡರು, ಕಾರ್ಯಕರ್ತರು, ಸೇರಿದಂತೆ, ಯುವಕ ಮಿತ್ರರು, ಸ್ಥಳೀಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 