ಜೀವ ಸಂಕುಲದ ದಾಹ ತಣಿಸಲು ಗಂಗೆಯನ್ನು ಧರೆಗಿಳಿಸಿದ ಭಗೀರಥ ವಿಶ್ವ ಮಾನವ : ಸಹಜಾನಂದ ಸ್ವಾಮಿಗಳು
ಮಹಾಲಿಂಗಪುರ 25: ಭಗೀರಥ ಮಹರ್ಷಿ ವಿಶ್ವದ ನೀರಿನ ದಾಹ ತೀರಿಸಲು ಘೋರ ತಪಸು ಮಾಡಿ ಶಿವನನ್ನು ಒಲಿಸಿಕೊಂಡು ಶಿವನಿಂದ ವರ ಪಡೆದು ಗಂಗೆಯನ್ನು ಧರೆಗಿಳಿಸಿ ಧರೆಯ ಮೇಲಿನ ಜನರ ನೀರಿನ ದಾಹ ತೀರಿಸಿದ ವಿಶ್ವ ಮಾನವ ಎಂದು ಸ್ಥಳೀಯ ಬ್ರಹ್ಮ ವಿದ್ಯಾಶ್ರಮ ಸಿದ್ದಾರೂಢ ಮಠದ ಸಹಜಯೋಗಿ ಸಹಜಾನಂದ ಮಹಾಸ್ವಾಮಿಗಳು ಹೇಳಿದರು.
ನಗರದ ಕೆಂಗೇರಿ ಮಡ್ಡಿಯಲ್ಲಿರುವ ಭಗೀರಥ ಮಹರ್ಷಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಮಹರ್ಷಿ ಭಗೀರಥ ಜಯಂತಿ ಹಾಗೂ ಮಂದಿರದ 15 ನೇ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿ ಭಗೀರಥ ಮಹರ್ಷಿ ಕಠೋರ ತಪಸ್ಸು ಮಾಡಿ ಗಂಗೆಯನ್ನು ಧರೆಗೆ ಇಳಿಸಿ ಸಕಲ ಜೀವ ಸಂಕುಲವನ್ನು ರಕ್ಷಿಸಿದ ಸಕಲರಿಗೂ ಲೆಸನ್ನೆ ಬಯಸಿದ ಜಗತ್ತಿನ ಮಹಾನ ವ್ಯಕ್ತಿ ಎಂದರು.
ನಂತರ ಮಾತನಾಡಿದ ಚಿಮ್ಮಡದ ವೀರಕ್ತ ಮಠದ ಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ ಭಗೀರಥ ಮಹರ್ಷಿಯವರು ಇಡೀ ಮನಕುಲದ ನೀರಿನ ದಾಹ ತೀರಿಸಿದ ಮಹಾಪುರಷರಾಗಿದ್ದರು. ಅವರ ಮಹಾನ ಶಿವ ಭಕ್ತರಾಗಿದ್ದರು. ಘೋರ ತಪ್ಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡಿದರು. ಎಂದರು
ಬೆಳಗಲಿಯ ಸಿದ್ದರಾಮ ಶಿವಯೋಗಿ ಕಾರ್ಯಕ್ರಮದ ಸಮುಖ ವಹಿಸಿ ಮಾತನಾಡಿ ಭಗೀರಥ ಸಮಾಜ ಯುವ ಜನತೆ ವ್ಯಸನ ಮುಕ್ತರಾಗಿ ಶೈಕ್ಷಣಿಕ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಇತರೆ ಸಮುದಾಯದೊಂದಿಗೆ ಸೌಹಾರ್ದ ಸಾಮರಸ್ಯ ಕಾಪಾಡಿಕೊಂಡು ಸಮಾಜದ ಏಳಿಗೆಗೆ ಮುಂದಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ನ್ಯಾಯವಾದಿ ನಾಗೇಶ ಲಾತೂರ ಸಮಾಜ ಬಾಂದವರು ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ಕೊಡುವತ್ತ ಹೆಚ್ಚಿನ ಗಮನ ಹರಿಸಬೇಕು, ಶಿಕ್ಷಣ ಪಡೆದ ಮಕ್ಕಳು ಸುಸಂಸ್ಕೃತರಾಗಿ ಸುಂದರ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರಾದ ಸುರೇಶ ಲಾತುರ ಮಾತನಾಡಿ ರಾಜ್ಯ ಸರ್ಕಾರವೇ ಭಗೀರಥ ಜಯಂತಿ ಆಚರಿಸುತ್ತಿರುವುದು ಉಪ್ಪಾರ ಸಮಾಜಕ್ಕೆ ಸಿಕ್ಕ ಅತೀ ದೊಡ್ಡ ಗೌರವ ಎಂದು ಹೇಳಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ/ ನಿಯರನ್ನು ಮತ್ತು ಸಾಧನೆ ಮಾಡಿದ ಸಮಾಜಭಾಂಧವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಶೇಖರ ಅಂಗಡಿ ಡಾ ಮಹಾಂತೇಶ ಆಕಳೆಗೋಳ, ಮಹಾಲಿಂಗಪ್ಪ ಜಕ್ಕಣ್ಣವರ, ರಾಜೇಂದ ಭಾಗೋಜಿ, ಶಿವಲಿಂಗಪ್ಪ ಕೊಡಗನೂರ್, ಯಲ್ಲಪ್ಪ ದೋಬಸಿ, ಯಮನಪ್ಪ ಉಪ್ಪಾರ, ರಮೇಶ ಲಾತುರ, ಹಣಮಂತ ಉಪ್ಪಾರ, ಬಸಪ್ಪ ಕೊಪ್ಪದ, ಶ್ರೀಶೈಲ್ ಪೂಜಾರಿ, ರಾಘವೇಂದ್ರ ಕಿಲ್ಲಾರಿ, ವಿಷ್ಣು ಲಾತುರ ಹಾಗೂ ಮಹಾರಾಷ್ಟ್ರದ ಸಮಾಜದ ಗುರು ಹಿರಿಯರು ಸರ್ವ ಧರ್ಮ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಮೆರವಣಿಗೆ : ಜಗದ್ಗುರು ಶಿವಯೋಗಿ ರಾಜೇಂದ್ರ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಮಹಾಲಿಂಗೇಶ್ವರ ಸಿದ್ದಸಂಸ್ಥಾನ ಮಠ ಮಹಾಲಿಂಗಪುರ ಇವರು ಮಹಾಲಿಂಗೇಶ್ವರ ದೇವಸ್ಥಾನದ ಮಹಾದ್ವಾರ ಹತ್ತಿರ ಭಗೀರಥರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಮತ್ತು ಕುಂಭ ಮೇಳಕ್ಕೆ ಚಾಲನೆ ನೀಡಿದರು. ಸಕಲ ಮಂಗಲ ವಾದ್ಯಗಳೊಂದಿಗೆ ಕುಂಭ ಮೇಳ ಮತ್ತು ಭಗೀರಥರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಕೆಂಗೇರಿಮಡ್ಡಿಯಲ್ಲಿರುವ ಭಗೀರಥ ದೇವಸ್ಥಾನ ಬಂದು ತಲುಪಿತು.
ನಾಯಕರಾದ ಮುತ್ತಪ್ಪ ಲಾತುರ, ರಾಜು ಮುದಕಪ್ಪಗೋಳ, ಮಲ್ಲಪ್ಪ ಮುದಕಪ್ಪಗೋಳ, ನಂದು ಲಾತುರ, ಲಕ್ಕಪ್ಪ ಲಾತುರ, ಮುರಿಗೆಪ್ಪಾ ಲಾತುರ, ಮಹಾದೇವ ಅಮ್ಮಣ್ಣವರ, ಶಿವಾನಂದ ಬಿರಾಜನವರ,ಶಂಕರ ಮುಗಳಖೊಡ, ಲಕ್ಷ್ಮಣ ಮುಗಳಖೊಡ, ಭೀಮಪ್ಪ ಪೂಜೇರಿ ಮಲ್ಲಪ್ಪ ಮುದಕಪ್ಪಗೋಳ, ವಿಜಯ್ ಲಾತುರ, ಭೀಮಶಿ ಸಸಾಲಟ್ಟಿ, ರಮೇಶ ಲಾತುರ ಸೇರಿದಂತೆ ನಗರದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಅನೇಕ ಸಮಾಜದ ಭಾಂದವರು ಗುರು ಹಿರಿಯರು ಯುವಕ ಸಂಘದ ಸದಸರು ಭಾಗವಹಿಸಿದ್ದರು,
ಕಾರ್ಯಕ್ರಮವನ್ನು ನ್ಯಾಯವಾದಿ ಹಣಮಂತ ಲಾತುರ, ದೇವೇಂದ್ರ ಲಾತೂರ ಸ್ವಾಗತಿಸಿದರು.ನ್ಯಾಯವಾದಿ ವಿಷ್ಟು ಲಾತೂರ ನಿರೂಪಿಸಿ, ವಂದಿಸಿದರು.