ಗದಗ 27: ಸರ್ಕಾರಿ ಪಾಲಿಟೆಕ್ನಿಕ್, ನರಸಾಪೂರ, ಬೆಟಗೇರಿ, ಗದಗ ಸಂಸ್ಥೆಯಲ್ಲಿ ಡಿಪ್ಲೋಮಾ ವಿವಿಧ ವಿಭಾಗಗಳಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಖಣದಟಠ ಉಟಠಚಿಟ ಇಟಿಜಡಿರಥಿ ಐಟಣಜಜ, ಏಚಿಡಿಟಿಚಿಣಚಿಞಚಿ ಬಹುರಾಷ್ಟ್ರೀಯ ಕಂಪನಿ ವತಿಯಿಂದ ರಾಜ್ಯ ಮಟ್ಟದ ನೇಮಕಾತಿ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಸದರಿ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಡಿಪ್ಲೋಮಾ ಪಾಸಾದ ಸುಮಾರು 200 ವಿದ್ಯಾರ್ಥಿಗಳು ನೇಮಕಾತಿ ಸಂದರ್ಶನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಖಣದಟಠ ಉಟಠಚಿಟ ಇಟಿಜಡಿರಥಿ ಐಟಣಜಜ, ಏಚಿಡಿಟಿಚಿಣಚಿಞಚಿ ಬಹುರಾಷ್ಟ್ರೀಯ ಕಂಪನಿ ಅಧಿಕಾರಿಗಳಾದ ಶ್ರೀ ಜಗದೀಶ ಊಖಂ ಮುಖ್ಯಸ್ಥರು ಹಾಗೂ ಇತರೆ ವಿವಿಧ ವಿಭಾಗಗಳ ಅಧಿಕಾರಿಗಳು ಹಾಜರಿದ್ದು, ಕಂಪನಿಯ ಕುರಿತು ಮಾಹಿತಿಯನ್ನು ಒದಗಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಸಂದರ್ಶನವನ್ನು ಜರುಗಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರು, ವಿಭಾಗಾಧಿಕಾರಿಗಳು, ಉದ್ಯೋಗ ಮತ್ತು ತರಬೇತಿ ಅಧಿಕಾರಿಗಳು ಎಲ್ಲ ಸಿಬ್ಬಂದಿಗಳು ಹಾಗೂ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಹಾಜರಿದ್ದರು.