ಪ್ರಾರ್ಥನಾ ವಿದ್ಯಾ ಮಂದಿರ ಅತ್ಯುತ್ತಮ ಫಲಿತಾಂಶ
Best result of prayer seminary
ಮುದ್ದೇಬಿಹಾಳ 27 : ಪಟ್ಟಣದ ಬಸವ ವಿದ್ಯಾಪ್ರಸಾರಕ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಪ್ರಾರ್ಥನಾ ವಿದ್ಯಾಮಂದಿರ ಪ್ರೌಢಶಾಲೆಯು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 94 ಫಲಿತಾಂಶ ಸಾಧಿಸಿದೆ. ಪರೀಕ್ಷೆಗೆ ಕುಳಿತ 29 ವಿದ್ಯಾರ್ಥಿಗಳಲ್ಲಿ 27 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ. ಶಾಲೆಯ ಮೈಮುನಾ ಮುದ್ನಾಳ ಶೇ.99.36 ಪ್ರಥಮ, ಸಿಂಚನಾ ಜವಳಕರ ಶೇ. 97.44, ದ್ವಿತೀಯ, ರೋಹಿಣಿ ಸೂರ್ಯವಂಶಿ ಶೇ.93.12, ತೃತೀಯ, ಸಿಂಚನಾ ಬೋಳಣ್ಣವರ ಶೇ.92.16, ಮೇಹ್ವಿಷ್ ಮುಲ್ಲಾ ಶೇ. 90.56 ಅಂಕ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಯನ್ನು ಬಸವ ವಿದ್ಯಾಪ್ರಸಾರಕ ಸಮಿತಿಯ ಅಧ್ಯಕ್ಷ ಸುಧೀರ ನಾವದಗಿ, ಕಾರ್ಯದರ್ಶಿ ನಿಂಗಣ್ಣ ಚಟ್ಟೇರ, ಆಡಳಿತ ಮಂಡಳಿಯ ಸದಸ್ಯರು, ಪ್ರೌಢಶಾಲಾ ವಿಭಾಗದ ಮುಖ್ಯ ಗುರುಮಾತೆ ದಿವ್ಯಾ ಹೆಬ್ಬಾರ ಮತ್ತು ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಗುರು ವಿನೋದ ಪಟಗಾರ ಮತ್ತು ಶಿಕ್ಷಕ ವೃಂದ ಅಭಿನಂದಿಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 