ಲೋಕದರ್ಶನ ವರದಿ
ಬಳ್ಳಾರಿ 18: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ, ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಇವರ ವತಿಯಿಂದ "31ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ" ಅಂಗವಾಗಿ "ಸೋಶಿಯಲ್ ಎಮರ್ಜೆನ್ಸಿ ರೆಸ್ಪಾನ್ಸ್ ವಾಲಂಟಿಯರ್ಸ್" ಇವರಿಂದ ರಸ್ತೆ ಅಪಘಾತಗಳ ಬಗ್ಗೆ "ಅಣಕು ಪ್ರದರ್ಶನ" (ಪ್ರಾತ್ಯಾಕ್ಷಿಕತೆ)ವನ್ನು ನಡೆಸಲಾಯಿತು.
ಸಂಜೆ 5.00 ಗಂಟೆಗೆ ಮೋತಿ ವೃತ್ತದಲ್ಲಿ ರಸ್ತೆ ಅಪಘಾತ ಬಗ್ಗೆ ಅಣಕು ಪ್ರದರ್ಶನ (ಪ್ರಾತ್ಯಾಕ್ಷಿಕತೆ)ವನ್ನು ನಡೆಸಲಾಯಿತು. ಈ ಅಣಕು ಪ್ರದರ್ಶನದಲ್ಲಿ ರಸ್ತೆಯಲ್ಲಿ ಅಪಘಾತ ಆದಾಗ ಹೇಗೆ ಜೀವರಕ್ಷಣೆ ಮಾಡಬೇಕೆಂದು "ಸರ್ವೇ" ತಂಡದವರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಂಬುಲೆಂಸ್ಗೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಕಳುಸುವ ಮೂಲಕ ಪ್ರದರ್ಶನವನ್ನು ನೀಡಿದ್ದರು.
ಈ ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದಶರ್ಿ ಎಂ.ಎ.ಷಕೀಬ್, ಇವರ ನೇತೃತ್ವದಲ್ಲಿ ಸರ್ವೇ ತಂಡದ ಹರಿ ಶಂಕರ್, ಉಮಾಮಹೇಶ್ವರಿ, ಇಜಾಝ್ ಅಹಮದ್, ಶಿವ ಸಾಗರ್, ಎಂ.ವಲಿ ಬಾಷಾ, ಕೆ.ನರಸಿಂಹ ರೆಡ್ಡಿ, ಮಂಜುನಾಥ್ ಮತ್ತು ಅನೇಕ ಸರ್ವೇ ತಂಡದವರು ಭಾಗಿಯಾಗಿದ್ದರು.