ಬೆಳಗಾವಿ :ಸುಮಧುರ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ನೀತಿ ಮೋಹನ
ಲೋಕದರ್ಶನ ವರದಿ
ಬೆಳಗಾವಿ02: ನಗರದ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಮೇಳ "ಔರಾ" ದಲ್ಲಿ ಮೂರು ದಿನಗಳ ಕಾಲ ನಡೆದ ವಿವಿಧ ಸೃಜನಶೀಲ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಫರ್ಧೆ ಗಳೊಂದಿಗೆ ನಡೆದು ಬಂದ ಈ ಮೇಳ ದೇಶಭಕ್ತಿ, ಕ್ರೀಡೆಯ ಮಹತ್ವ ಮತ್ತು ಮನೋರಂಜನೆ ಗಳನ್ನೂ ಒಳಗೊಂಡ ಸಮೂಹ ನೃತ್ತ್ಯ ಎಲ್ಲರ ಮನಗೆದ್ದಿತು. ಹಲವು ಕಲ್ಪನೆಗಳ ಮೇಲೆ ನಡೆದ ಫ್ಯಾಷನ್ ಶೋ ಸ್ಫರ್ಧೆಯಲ್ಲಿ 15 ಕ್ಕಿಂತ ಹೆಚ್ಚು ತಂಡಗಳು ಭಾಗವಹಿಸಿದ್ದವು. ಶಾಸ್ತ್ರೀಯ ಮತ್ತು ಪಾಶ್ಚಿಮಾತ್ಯ ಗಾಯನ ಸ್ಫರ್ಧೆಗಳು ನಡೆದವು. ವಿದ್ಯಾರ್ಥಿಗಳು ಸಾಹಿತ್ಯಕ್ಕೆ ಸಂಬಂಧಪಟ್ಟ ಕವನ ರಚನೆ, ಕಥೆ ಬರೆಯುವುದು ಹೀಗೆ ಹಲವು ಅರ್ಥಪೂರ್ಣ ಸ್ಫರ್ಧೆಗಳಲ್ಲಿ ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಿದರು. ಇನ್ನು ಕೆಲವು ವಿದ್ಯಾರ್ಥಿ ಗಳು ತಮ್ಮ ಕ್ರೀಯಾತ್ಮಕ ಮತ್ತು ಭಾವನಾತ್ಮಕ ಪ್ರತಿಭೆಗಳನ್ನು ಫೋಟೋಗ್ರಾಫಿ ಮಾತು ಕಿರು ಚಿತ್ರ ಸ್ಪಧರ್ೆಗಳಲ್ಲಿ ಮನಮುಟ್ಟುವಂತೆ ಸೆರೆಹಿಡಿದಿದ್ದಾರೆ. ಹಲವು ಸಾಮಾಜಿಕ ಆಗು ಹೋಗುಗಳ ಮತ್ತು ಸಾಮಾಜಿಕ ಪಿಡುಗುಗಳ ಮೇಲೆ ಬೀದಿನಾಟಕಗಳನ್ನು ಪ್ರದಶರ್ಿಸಿದರು. ಹೀಗೆ ವಿದ್ಯಾರ್ಥಿಗಳಲ್ಲಿರುವ ಸಾಂಸ್ಕೃತಿಕ ಮತ್ತು ಕಲಾತ್ಮಕ ಸೃಜನಶೀಲತೆಯನ್ನು ಪ್ರದರ್ಶಿಸಲು ಮತ್ತು ಪ್ರೋತ್ಸಹಹಿಸಲು ರಾಷ್ಟ್ರ ಮಟ್ಟದ ವೇದಿಕೆಯಾಗಿದ್ದ ಕನರ್ಾಟಕದ ಹೆಸರಾಂತ "ಔರ -19" ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಮೇಳ ಮೂರನೆಯ ದಿನ ಸಂಜೆ ಹೆಸರಾಂತ ಹಿನ್ನಲೆ ಗಾಯಕಿ ನೀತಿ ಮೋಹನ್ ಸಂಗೀತ ಸಂಜೆ ಯೊಂದಿಗೆ ಮುಕ್ತಾಯವಾಯಿತು.
ನೀತಿ ಮೋಹನ್ ಮತ್ತು ತಂಡದವರಿಂದ ಈ ಸಂಗೀತ ಸಂಜೆ ನಡೆಯಿತು. ಸುಮಾರು 7500 ಪ್ರೇಕ್ಷಕರು ಈ ಸಂಜೆಗೆ ಕಾದು ಕುಳಿತಿದ್ದರು.ಮಧುರ ಹಾಡುಗಳೊಂದಿಗ ೆಗಾಯನ ಆರಂಭಿಸಿದ ನೀತಿ ಮೋಹನ್ ಇಷ್ಕ ವಾಲಾ ಲವ್, ಆಜಾ ಬಾಲಂ, ನೈನೋ ವಾಲೆ ನೇ, ಪ್ಯಾರ್ ಮಾಂಗಾ ಹಾಯ್ ತುಮಿ ಸೆ, ಹರ್ ಕಿಸಿ ಕೋ ನಹಿ ಮಿಲ್ತಾ, ತುಮೇ ಆಪ್ನ ಬನಕೆ ಜುನೂನ್, ಅಗರ್ ತುಮ ಸಾಥ್ ಹೊ, ಜಗ ಗೂಮೆಯಾ ಹೀಗೆ ಮುಂತಾದ ಇಂಪಾದ ಗೀತೆಗಳಿಂದ ಜನರನ್ನು ಸಂಗೀತ ಲೋಕಕ್ಕೆ ಕರೆದುಕೊಂಡು ಹೋದರು ನಂತರ ಪಂಜಾಬಿ, ಲಂಡನ್ ತುಮ್ಕಾಡ, ಬದ್ರಿ ಕಿ ದಿಲ್ಹಾನಿ, ಗುಂಡೆ ಚಿತ್ರದ ತೂನೆ ಮಾರಿ ಎಂಟ್ರಿ, ಬಲಂ ಪಿಚ್ಕಾರಿ, ರಾಕ್ ಶೈಲಿಯಲ್ಲಿ ಹಲವಾರು ಗೀತೆಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕ ಸಮೂಹವನ್ನೇ ಕುಣಿಸಿದರು.ಕೊನೆಗೆ ಪ್ರಸಿದ್ಧ ಗೀತೆ ದಮ್ ಮಾರೋ ದಮ್ ಹಾಡಿ ಸೇರಿದ ಸಮೂಹವನ್ನು ಸಂಗೀತದ ನಶೆಯಲ್ಲಿ ತೇಲಿಸಿದರು. ಒಟ್ಟಿನಲ್ಲಿ ಸೇರಿದ್ದ ಜನಸಮೂಹವನ್ನು ಸುಮಾರು ಎರಡೂವರೆ ಘಂಟೆಗಳ ಕಾಲ ನೀತಿ ಮೋಹನ್ ಸಂಗೀತ ಮೋಹ ಮತ್ತು ಮಂತ್ರ ಮುಗ್ದರನ್ನಾಗಿಸಿತು.
ನಗರದ ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಕೆ ಎಲ್ ಎಸ ಸದಸ್ಯರು, ಆಮಂತ್ರಿತರು, ಸಿಬ್ಬಂದಿ ವರ್ಗ ವಿದ್ಯಾಥರ್ಿ ಸಮೂಹ. ಈ ಸಂಗೀತ ಸಂಜೆಯನ್ನು ಸವಿದರು .ಕೆ ಎಲ್ ಎಸ ಅಧ್ಯಕ್ಷರಾದ ಅನಂತ ಮಂಡಗಿ, ಕಾರ್ಯಾ ಧ್ಯಕ್ಷರಾದ ಎಂ ಆರ್ ಕುಲಕರ್ಣಿ , ಆಡಳಿತ ಮಂಡಳಿ ಅಧ್ಯಕ್ಷರಾದ ಯು. ಏನ್. ಕಾಲಕುಂದ್ರಿಕರ, ಪ್ರಾಚಾರ್ಯ ಡಾ. ಎ. ಎಸ. ದೇಶಪಾಂಡೆ, ಸಾಂಸ್ಕೃತಿಕ ವಿಭಾಗದ ಸಂಯೋಜಕ ಡಾ. ಶಿವಕುಮಾರ್, ವಿದ್ಯಾರ್ಥಿ ಪ್ರತಿನಿಧಿಗಳಾದ ಆಕಾಶ್ ದೇಶಪಾಂಡೆ, ನಿವೇದಿತಾ ಅಂಕಲಗಿ, ಆಯಾತ ಅತ್ತಾರ್ ಹಾಜರಿದ್ದರು.
ಇದಾದ ಮೇಲೆ ಕೆ ಎಲ್ ಎಸ ಅಧ್ಯಕ್ಷರಾದ ಅನಂತ ಮಂಡಗಿ, ಕಾರ್ಯಾ ಧ್ಯಕ್ಷರಾದ ಎಂ ಆರ್ ಕುಲಕರ್ಣಿ , ಆಡಳಿತ ಮಂಡಳಿ ಅಧ್ಯಕ್ಷರಾದ. ಯು. ಏನ್. ಕಾಲಕುಂದ್ರಿಕರ, ಪ್ರಾಚಾರ್ಯ ಡಾ. ಎ. ಎಸ. ದೇಶಪಾಂಡೆ ಅವರು ನೀತಿ ಮೋಹನ್ ಅವರನ್ನು ಸನ್ಮಾನಿಸಿದರು. ನಂತರ ನೀತಿ ಮೋಹನ್ ಅವರು "ಔರಾ"ದ ಮುಖ್ಯ ಟ್ರೋಫಿ ಯನ್ನೂ ವಿಜೇತರಿಗೆ ವಿತರಿಸಿದರು.ಕೆ ಎಲ್ ಇ ಸಂಸ್ಥೆಯ ಜೆ ಏನ್ ಎಂ ಸಿ ಜನರಲ್ ಚಾಂಪಿಯನ್ ಪ್ರಶಸ್ತಿ ಬಾಚಿಕೊಂಡಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 