ಬೆಳಗಾವಿ ಮಾಹಿತಿ ಆಯುಕ್ತರಿಂದ ದಂಡಕ್ಕೆ ಆದೇಶ

ಬೆಳಗಾವಿ ಮಾಹಿತಿ ಆಯುಕ್ತರಿಂದ ದಂಡಕ್ಕೆ ಆದೇಶ  Belagavi Information Commissioner orders a penalty.


ಹಾವೇರಿ, ಸೆ.15 (ಕರ್ನಾಟಕ ವಾರ್ತೆ): ರಾಜ್ಯ ಮಾಹಿತಿ ಆಯೋಗದ ಬೆಳಗಾವಿ ಪೀಠದಲ್ಲಿ ಮೇಲ್ಮನವಿಗಳ ವಿಚಾರಣೆ ನಡೆಸಲಾಯಿತು. ಮಾಹಿತಿ ನೀಡುವಲ್ಲಿ ಕರ್ತವ್ಯ ಲೋಪ ಎಸಗಿರುವುದು ಹಾಗೂ ಆಯೋಗದ ಮೇಲ್ಮನವಿ ವಿಚಾರಣೆಯ ನೋಟಿಸ್ಗೆ ಸ್ಪಂದಿಸದೆ ಗೈರುಹಾಜರಾದ ಕಾರಣ ಬೆಳಗಾವಿ ವಿಭಾಗದ ಪೊಲೀಸ್, ಕಂದಾಯ, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ದಂಡ ವಿಧಿಸಿ, ದಂಡದ ಮೊತ್ತವನ್ನು ತಕ್ಷಣ ಪಾವತಿಸುವಂತೆ ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ ಅವರು ಆದೇಶಿಸಿದ್ದಾರೆ.