ಕನ್ನಿಹಳ್ಳಿ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ.ಮೇ.23 : ತಾಲೂಕಿನ ಕನ್ನಿಹಳ್ಳಿ ಗ್ರಾಮದಲ್ಲಿ (ಇಂದು) ಬುಧವಾರ ಹಾಗೂ (ನಾಳೆ)ಗುರುವಾರ ಬೀರಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ ಹಾಗೂ ಮೂರ್ತಿ ಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಜರುಗಲಿದೆ ಎಂದು ತಾಲೂಕು ಕುರುಬ ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ್ ಹೇಳಿದರು.

ಕನ್ನಿಹಳ್ಳಿ ಗ್ರಾಮದಲ್ಲಿನ ಬೀರಲಿಂಗೇಶ್ವರ ದೇವಸ್ಥಾನದ ಬಳಿ ಪತ್ರಿಕಾ ಗೋಷ್ಠಿ ನಡೆಸಿ ಅವರು ಮಾತನಾಡಿ ಬುಧವಾರದಂದು ಸಂಜೆ ಸಕಲ ವಾಧ್ಯಗಳೊಂದಿಗೆ ಗಂಗೆ ಪೂಜೆ ಹಾಗೂ ಗಣಹೋಮ ಜರುಗಲಿದ್ದು ಮೇ 25ರ ಗುರುವಾರ ಬೆಳೆಗ್ಗೆ 11ಕ್ಕೆ ಕುಂಭಮೇಳ ಹಾಗೂ ಧರ್ಮಸಭೆ, ದೇವಸ್ಥಾನ ಲೋಕಾರ್ಪಣೆ ಹಾಗೂ ಮೂತರ್ಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತದೆ ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು, ತಿಂಥಿಣಿ ಬ್ರಿಡ್ಜ್ನ ಕನಕ ಗುರು ಪೀಠದ ಪರಮ ಪೂಜ್ಯ ಶ್ರೀ ಶ್ರೀ ಸಿದ್ದರಮನಂದಪುರಿ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ, ಉತ್ತಂಗಿ ಕೊಟ್ಟೂರು, ಹನಸಿ ಮನಿ ಪ್ರಜ ಸೋಮಶಂಕರ ಮಹಾಸ್ವಾಮಿಗಳು, ನಂದೀಪುರ ಪುಣ್ಯಕ್ಷೇತ್ರದ ಡಾ . ಮಹೇಶ್ವರ ಸ್ವಾಮಿಗಳು, ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಮಾಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು ಹ್ಯಾಳ್ಯಾದ  ಹೆಚ್ ಎಂ ಕೊಟ್ರಯ್ಯ ಹಾಗೂ ಕನ್ನಿಹಳ್ಳಿ ಪಠಾಧೀಶರು ಮತ್ತು ವಡೆಯರ್ ಪೌರೋಹಿತ್ಯ ವಹಿಸಲಿದ್ದು ಶಾಸಕ ಕೆ.ನೇಮಿರಾಜ್ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ತಾಲೂಕು ಕುರುಬ ಸಂಘದ ಅಧ್ಯಕ್ಷ ಬುಡ್ಡಿ ಬಸವರಜ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ವೈ ದೇವೇಂದ್ರಪ್ಪ ಸೇರಿದಂತೆ ಸಮಾಜದ ರಾಜ್ಯ, ಜಿಲ್ಲಾ ನಿದರ್ೇಶಕರುಗಳು ಆಗಮಿಸಲಿದ್ದಾರೆ ಜೊತೆಗೆ ಪ್ರತಿಷ್ಠಾಪನ ದಿನದ ರಾತ್ರಿ  ಸಾಮಾಜಿಕ ನಾಟಕ ಪ್ರದರ್ಶನ ಹಾಗೂ 26ರ ಶುಕ್ರವಾರ ಟಗರಿನ ಕಾಳಗ ಜರುಗಲಿದೆ ಸಮಾಜ ಬಾಂಧವರು ಹೆಚಿನ ಸಂಖ್ಯೆಯಲ್ಲಿ ದೈವ ಕಾರ್ಯಕ್ಕೆ ಅಗಮಿಸಿ ಬೀರಲಿಂಗೇಶ್ವರ ಕೃಪೆಗೆ ಪಾತ್ರರಾಗುವಂತೆ ತಿಳಿಸಿದರು.

ಟ್ರಸ್ಟ್ನ ಅಧ್ಯಕ್ಷ ಮುದೇನೂರು ಚಂದ್ರಪ್ಪ, ಸಮಾಜದ ಮುಖಂಡರಾದ ಮೇಟಿ ಕೊಟ್ರಪ್ಪ, ವಸಂತ, ಅಂಜಿನಪ್ಪ, ಕೆ.ವಿ ಪ್ರಶಾಂತ, ನಿವೃತ್ತ ಶಿಕ್ಷಕ ಮೂಗಪ್ಪ, ನೀಲಪ್ಪ, ಅಂಜಿನಪ್ಪ, ಅಲಬೂರು ಬೀರಪ್ಪ, ಬಿ.ನಾಗರಾಜ, ಬಿ.ನಾಗಪ್ಪ, ಮಡಿವಾಳರ ಪಕ್ಕೀರಪ್ಪ ಸೇರಿದಂತೆ ಇನ್ನಿತರರು ಇದ್ದರು