ಬಸವೇಶ್ವರ ಕೋ-ಆಪ್ ಕ್ರೇಡಿಟ್ ಸೋಸೈಟಿ 2,26,31,981 ರೂ ನಿವ್ವಳ ಲಾಭ: ಹಾದಿಮನಿ
Basaveshwara Co-op Credit Society net profit of Rs 2,26,31,981: Hadimani
ಯರಗಟ್ಟಿ 06 : ಪಟ್ಟಣದ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೇಡಿಟ್ ಸೋಸಾಯಿಟಿಯು 2025-26 ನೇ ಸಾಲಿನಲ್ಲಿ ನಿವ್ವಳ 2,26,31,981=00 ರೂ ನಿವ್ವಳ ಲಾಭವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾಬಳೇಶ್ವರ ಹಾದಿಮನಿ ತಿಳಿಸಿದರು.ಕಳೆದ ಆರ್ಥಿಕ ವರ್ಷಕ್ಕಿಂತ ಈ ವರ್ಷ 10ಅ ನಿವ್ವಳ ಲಾಭದಲ್ಲಿ ಹೆಚ್ಚಳವಾಗಿದೆ ಎಂದು ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ ಅವರು ಸಂಘವು ಮೂರು ಶಾಖೆಗಳನ್ನು ಹೊಂದಿದ್ದು, ಸಂಘವು 2 ಕೋಟಿ 35 ಲಕ್ಷ ರೂ ಷೇರು ಬಂಡವಾಳ, 73 ಕೋಟಿ 36 ಲಕ್ಷ ರೂ ದುಡಿಯುವ ಬಂಡವಾಳ, 8 ಕೋಟಿ 81 ಲಕ್ಷ ರೂ. ಕಾಯ್ದಿಟ್ಟ ನಿಧಿ ಹಾಗೂ ಇತರ ನಿಧಿಗಳನ್ನು ಹೊಂದಿದೆ. ಹಾಗೂ 55 ಕೋಟಿ 88 ಲಕ್ಷ ರೂ. ಸಾಲ ವಿತರಣೆ ಮಾಡಿದ್ದು, 59 ಕೋಟಿ 02 ಲಕ್ಷ ರೂ. ಠೇವುಗಳನ್ನು ಹೊಂದಿದೆ.
ಸಂಘ ವ್ಯವಹಾರದ ಜೊತೆಗೆ ಸದಸ್ಯರಿಗೆ ಸೇಪ್ ಲಾಕರ್ ಸೇವೆ ಒದಗಿಸುತ್ತಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಸಂಘವು ಸದರಿ ವರ್ಷದಲ್ಲಿ 14 ಲಕ್ಷ 19 ಸಾವಿರ ರೂ. ಕಟ್ಟಡ ಸವಕಳಿ ನಿಧಿ, ಮುಳುಗುವ ಸಾಲದ ನಿಧಿಗೆ 10 ಲಕ್ಷ ರೂ ಮೀಸಲು ಇರಿಸಲಾಗಿದೆ ಎಂದು ತಿಳಿಸಿದ್ದಾರೆ.ಕಳೆದ ಆರ್ಥಿಕ ವರ್ಷ 2024-25 ನೇ ಸಾಲಿನಲ್ಲಿ ಸದಸ್ಯರಿಗೆ 25ಅ ಡಿವಿಡೆಂಡ್ ವಿತರಣೆ ಮಾಡಿದ್ದು ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದಕ್ಕೆ ಸದಸ್ಯರ, ನಿರ್ದೇಶಕ ಮಂಡಳಿ, ಶಾಖಾ ಸಲಹಾ ಸಮೀತಿ ಹಾಗೂ ಸಿಬ್ಬಂದಿ ವರ್ಗದವರ ಸಹಕಾರ ಅತಿ ಅಮೂಲ್ಯವಾದದ್ದು ಎಂದು ಸಭೆಯಲ್ಲಿ ತಿಳಿಸಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 