ನೂತನ ತಹಶೀಲ್ದಾರರಾಗಿ ಬಸವರಾಜ ತೆನ್ನಳ್ಳಿ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ

ಯಲಬುರ್ಗಾ ಅ 07: ತಾಲೂಕಿನ ನೂತನ ತಹಶೀಲ್ದಾರರಾಗಿ ಬಸವರಾಜ ತೆನ್ನಳ್ಳಿ ಅಧಿಕಾರ ಸ್ವೀಕರಿಸಿದರು.ಈ ಹಿಂದೆ ತಾಲೂಕಿನ ತಹಶೀಲ್ದಾರರಾಗಿ ವಿಠಲ್ ಚೌಗಲೆ ಕಾರ್ಯನಿರ್ವಹಿಸಿದ್ದರು. ಇವರ ವರ್ಗಾವಣೆ ಹಿನ್ನೆಲೆ ನೂತನ ತಹಶೀಲ್ದಾರರಾಗಿ ಬಸವರಾಜ ತೆನ್ನಳ್ಳಿ ಅಧಿಕಾರವನ್ನು ಸ್ವೀಕರಿಸಿದರು, ಇವರು ಮೂಲತಃ ವಿಜಯಪುರನವರಾಗಿದ್ದಾರೆ.ತಾಲೂಕು ಆಡಳಿತ ಸಿಬ್ಬಂದಿಗಳು ವಿಠಲ್ ಚೌಗಲೆ ಅವರಿಗೆ ಬಿಳ್ಕೊಡುಗೆ ನೀಡಿ, ನೂತನ ತಹಶೀಲ್ದಾರರಾದ ಬಸವರಾಜ ತೆನ್ನಳ್ಳಿ ಅವರನ್ನು ಸ್ವಾಗತಿಸಿದರು.