ಬಸವರಾಜ್ ಸೋಮಪ್ಪ ಹೊಸಮನಿ ಅವರಿಗೆ ಬೆಳಗಾವಿ ರತ್ನ ರಾಷ್ಟ್ರ ಪ್ರಶಸ್ತಿ

ಬಸವರಾಜ್ ಸೋಮಪ್ಪ ಹೊಸಮನಿ ಅವರಿಗೆ ಬೆಳಗಾವಿ ರತ್ನ ರಾಷ್ಟ್ರ ಪ್ರಶಸ್ತಿ Basavaraj Somappa Hosamani to be conferred with Belgaum Ratna National Award

ಬೈಲಹೊಂಗಲ 15 : ತಾಲ್ಲೂಕಿನ ವಣ್ಣೂರ್ ಗ್ರಾಮದ ಸಮಾಜ ಸೇವಕ ಬಸವರಾಜ್ ಸೋಮಪ್ಪ ಹೊಸಮನಿ ಅವರಿಗೆ ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್  ಸಹಯೋಗದಲ್ಲಿ ಬೆಳಗಾವಿ ಕನ್ನಡ ಭವನದಲ್ಲಿ ನಡೆದ  ಕಾರ್ಯಕ್ರಮದಲ್ಲಿ  "ಬೆಳಗಾವಿ ರತ್ನ ರಾಷ್ಟ್ರ ಪ್ರಶಸ್ತಿ" ಯನ್ನು ನೀಡಿ ಗೌರವಿಸಲಾಯಿತು.  ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಯ.ರು.ಪಾಟೀಲ, ಸಾಹಿತಿ ಸುರೇಶ ಕೊರಕೊಪ್ಪ, ಮಂಜುಳಾ ಪಾವಗಡ, ರಾಜು ಮೋರೆ, ಮೈತ್ರಾಯಿನಿ ಗದಿಗೆಪ್ಪಗೌಡರ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.