ಜಾನಪದ ವೈಭವ ಕಾರ್ಯಕ್ರಮ ಉದ್ಘಾಟನೆ

ಜಾನಪದ ವೈಭವ ಕಾರ್ಯಕ್ರಮ ಉದ್ಘಾಟನೆ Inauguration of folk glory program

ಲೋಕದರ್ಶನ ವರದಿ 

ಧಾರವಾಡ 23 : ಆಡಿ ಬಾ ನನ ಕಂದ ಅಂಗಾಲ ತೊಳದೇನ ತೆಂಗಿನ ಕಾಯಿಯ ತಿಳೀನೀರ ತೊಗೊಂಡು ಬಂಗಾರದ ಮಾರಿತೊಳದೇನ” ಎಂದು ಜಾನಪದ ಹಾಡಿನ ಮುಖಾಂತರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಾರಂಜಿ ಮಕ್ಕಳ ಕಲಾ ವೇದಿಕೆ ಹಾಗೂ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಂಯೋಗದಲ್ಲಿ ಏರಿ​‍್ಡಸಿದ ಜಾನಪದ ವೈಭವ ಕಾರ್ಯಕ್ರಮವನ್ನು ಡಾ.ಪ್ರಭಾಕರ ಲಗಮಣ್ಣವರ ಉದ್ಘಾಟಿಸಿ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯಲಿಗಾರ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಸಂಸ್ಕಾರ, ಸಂಸ್ಕೃತಿ ಮಾಯವಾಗುತ್ತಿದ್ದು ಬೇಸರದ ಸಂಗತಿ. ನಮ್ಮ ಜನಪದ ಕಲಾವಿದರು ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಜನಪದ ಹಾಡುಗಳನ್ನು ಕಲಿಸಿಕೊಡಬೇಕು ಅಂದಾಗ ನಮ್ಮಜನಪದ ಕಲೆ ಉಳಿಯಲು ಸಾದ್ಯಎಂದರು. 

ವೇದಿಕೆಯ ಮೇಲೆ ಮಲ್ಲಪ್ಪ ಬೂದಿಹಾಳ ಡೊಳ್ಳಿನ ಪದಗಳನ್ನು ಹಾಡುವ ಮುಖಾಂತರ ಜನರನ್ನು ರಂಜಿಸಿದರು. ಪಕ್ಕಿರ​‍್ಪ ಹರಿಜನ, ಮಡಿವಾಳಪ್ಪ ಬೇಲೂರತತ್ವ ಪದಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು. ವೇದಿಕೆಯ ಮೇಲೆ ಶಿಲ್ಪಾ, ವಿನೋದಾ, ಶೇಖಪ್ಪಕನಗೌಡರ, ಈರ​‍್ಪ ಮಿರ್ಜಿ, ಇಮಾಮ ಬುಡ್ಡೆನ್ನವರ, ಈರ​‍್ಪ ಹರಕಿಇದ್ದರು ಕಾರ್ಯಕ್ರಮದ ನಿರೂಪಣೆಯನ್ನು ಯಕ್ಕೇರ​‍್ಪ ನಡುವಿನಮನಿ (ಶಾನವಾಡ ಮಾಸ್ತರ) ನಡೆಸಿಕೊಟ್ಟರು.