ಬಸವ ಕೋ.ಆಪ್ ಕ್ರೆಡಿಟ ಸೊಸಾಯಿಟಿಯ 8ನೇ ಶಾಖೆ ಉದ್ಘಾಟನೆ
Basava Co-op Credit Society's 8th branch inaugurated
ರಾಯಬಾಗ, 12 : ರೈತರ ಮತ್ತು ಗ್ರಾಹಕರ ಸಹಕಾರದಿಂದ ಸಹಕಾರ ಸಂಘಗಳು ಆರ್ಥಿಕವಾಗಿ ಬೆಳೆಯಲು ಸಾಧ್ಯ ಎಂದು ಹಿರಿಯ ಮುಖಂಡ ಡಿ.ಎಸ್.ನಾಯಿಕ ಹೇಳಿದರು. ಶುಕ್ರವಾರ ತಾಲೂಕಿನ ಜಲಾಲಪುರ ಗ್ರಾಮದಲ್ಲಿ ಜನವಾಡದ ಬಸವ ಕೋ.ಆಪ್ ಕ್ರೆಡಿಟ ಸೊಸಾಯಿಟಿಯ 8ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರಿಗೆ ಉತ್ತಮ ಸೇವೆ ನೀಡಿದ ಹಿನ್ನೆಲೆಯಲ್ಲಿ ಬಸವ ಸಹಕಾರಿ ಸಂಘಕ್ಕೆ ಹಾವೇರಿಯಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರ ಸಪ್ತಾಹದಲ್ಲಿ ಬೆಳಗಾವಿ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತಗೊಂಡಿರುವ ಅತ್ಯಂತ ಸಂತೋಷ ವಿಷಯ ಎಂದರು.
ಸಂಸ್ಥಾಪಕ ಅಧ್ಯಕ್ಷ ರಾಮಗೌಡ ಪಾಟೀಲ, ಉಪಾಧ್ಯಕ್ಷ ಬಾಬು ಘಾಟಗೆ, ನೂತನ ಶಾಖೆ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಾಸಾಹೇಬ ಹೇರವಾಡೆ, ಉಪಾಧ್ಯಕ್ಷ ಶಿವಚಂದ್ರ ಮಾನೆ, ಸಂಚಾಲಕರಾದ ರಾಜೇಂದ್ರ ಮುರಚಿಟ್ಟಿ, ಬಾಬಾಸೋ ಅವಾಡೆ, ಅಮರ ನಿಗವೆ, ವಿನಾಯಕ ಪವಾರ, ನಾಮದೇವ ಕಾಂಬಳೆ, ಆನಂದ ಚೌಗಲಾ, ಮೌಲಾ ನದಾಫ, ನಾನಾಸಾಹೇಬ ಸೋನಾರ, ಮಲ್ಲಪ್ಪ ಜಗದಾಳೆ, ಮಹಾದೇವ ಶಿಂಗಾಡಿ, ಜಗದೀಶ ಪವಾರ ಹಾಗೂ ರಮೇಶ ವಂಡೆ, ಸಂಜಯ ಜಾಧವ, ರಾಜು ಜಾಧವ, ಬಸು ಅವ್ವನ್ನವರ, ಬಸಗೌಡ ಪಾಟೀಲ, ರಾವಸಾಹೇಬ ಹೇರವಾಡೆ, ಪವಣ ಕೋಣೆ, ವಿನಾಯಕ ಜಗದಾಳೆ, ಕುಮಾರ ಹಿಡಕಲ ಸೇರಿ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 