ಚಿನ್ನದ ಪದಕ ಪಡೆದ ಬಾನು


 ಗುಳೇದಗುಡ್ಡ 09: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 2020ನೇ ಸಾಲಿನ ಅಂತಿಮ ಬಿಎ. ಪದವಿ ಪರೀಕ್ಷೆಯಲ್ಲಿ ಕನ್ನಡ ಐಚ್ಚಿಕ ವಿಷಯಕ್ಕೆ ಹೆಚ್ಚಿನ ಅಂಕ ಪಡೆದು ಪ್ರಥಮ ರಾ​‍್ಯಂಕ್ ಪಡೆದ ಗುಳೇದಗುಡ್ಡದ ಬಿ.ಎಂ.ಸಂಕನೂರ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಬಾನು ಭಾಗವಾನ ಚಿನ್ನದ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.   

   ಕಾಲೇಜಿನ ಪ್ರಾಚಾರ್ಯ ಬಿ.ಎಂ.ಸಂಕನೂರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ನಮ್ಮ ನೂತನ ಕಾಲೇಜಿನ ಪ್ರಥಮ ಬ್ಯಾಚಿನ ಅಂತಿಮ ಬಿ.ಎ. ತರಗತಿಯ ವಿದ್ಯಾರ್ಥಿನಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ತೆಗೆದುಕೊಂಡು ಚಿನ್ನದ ಪದಕ ಪಡೆದಿದ್ದಲ್ಲದೇ ಬಿ.ಎ. ತರಗತಿಗೆ ರಾಜ್ಯದ 10 ನೇ ರಾ​‍್ಯಂಕ್ ಸಹ ಪಡೆದಿದ್ದಾರೆಂದು  ಪ್ರಾಚಾರ್ಯ ತಿಳಿಸಿದ್ದಾರೆ.   

   ಕಾಲೇಜಿನ ಸಿಬ್ಬಂದಿ ಪ್ರೊ. ವಾಸು ಬೆಕಿನಾಳ, ಚನ್ನಪ್ಪ ಮುದಗಲ್, ಪೂಜಾ ಮಾದರ, ಬಿ.ಬಿ.ಗುರುವಿನ್‌ಮಠ, ಎನ್‌.ಎ.ಬೂದಿಹಾಳ, ಎಸ್‌.ಪಿ.ಗಾಜಿ, ಎಂ.ಎಚ್‌.ಕುಂಬಾರ, ಮಂಜುಳಾ ಹಿರೇಮಠ, ರಾಮಣ್ಣ ಹುಬ್ಬಳ್ಳಿ ಹಾಗೂ ಇತರರು ಇದ್ದರು.