ಇಂಡಿ ತಾಲ್ಲೂಕಿನ್ಯಾದಂತ ಬಕ್ರೀದ ಹಬ್ಬ ಆಚರಣೆ
Bakreeda festival celebration like Indi Talukinya
ಲೋಕದರ್ಶನ ವರದಿ
ಇಂಡಿ 28 : ಬಕ್ರೀದ ಮುಸ್ಲಿಂ ಬಾಂಧವರ ಪ್ರಮುಖ ತ್ಯಾಗ ಮತ್ತು ಬಲಿದಾನದ ಹಬ್ಬವಾಗಿದೆ. ಅಲ್ಲಾಹನ ಮೇಲಿನ ಭಕ್ತಿಯಿಂದ ಪ್ರವಾದಿ ಮಹಮ್ಮದ ಇಬ್ರಾಹಿಂ ತನ್ನ ಮಗನನ್ನೇ ಬಲಿ ಕೊಡಲು ಮುಂದಾದಾಗ ಅವನ ತ್ಯಾಗಕ್ಕೆ ಮೆಚ್ಚಿ ಅಲ್ಲಾಹ ಮಗನ ಬದಲಾಗಿ ಕುರಿಯನ್ನು ಬಲಿ ನೀಡುವಂತೆ ಮಾಡಿದ ಪವಾಡ ನೆನಪಿಸುವ ಹಬ್ಬವೇ ಈ ಪವಿತ್ರ ಬಕ್ರೀದ್ ಹಬ್ಬ ಎಂದು ಇಸ್ಲಾಂ ಧರ್ಮಗುರು ಮೌಲಾನಾ ಶಾಕೀರ ಹುಸೇನ ಕಾಶ್ಮಿ ಹೇಳಿದರು.
ನಗರದ ಹಂಜಗಿ ರಸ್ತೆಯ ಈದಗಾ ಮೈದಾನದಲ್ಲಿ ಬಕ್ರೀದ ಹಬ್ಬದ ನಿಮಿತ್ಯ ನಡೆದ ನಮಾಜ ಕ್ರಾರ್ಯಕ್ರಮದ ಮೊದಲು ಅವರು ಮಾತನಾಡಿದರು. ನಮಾಜ ಕಾರ್ಯಕ್ರಮದಲ್ಲಿ ಧರ್ಮಗುರು ಮುಫ್ತಿ ಅಬ್ದುಲ ರಹಮಾನ, ಧರ್ಮಗುರು ಹಾಪೀಜ, ಫಯರೋಜ ಬಾಗವಾನ, ಜಾವೇದ ಮೋಮಿನ, ಅಬ್ದುಲ ರಹಮಾನ ಬಾಗವಾನ ,ಅಬ್ದುಲ ರಶಿದ ಮುಗಳಿ, ಷರೀಪ ಪಟೇಲ, ಹಸನ ಮುಜಾವರ, ಯುನುಶ ರೇವೂರಕರ, ಫಾರುಖ ತುರ್ಕಿ, ಫಯಾಜ ಬಾಗವಾನ, ರಫೀಕ ಇಂಡಿಕರ, ಅಬ್ದುಲ ರಶೀದ ಅರಬ, ಖಾಜಾ ಪಟೇಲ, ಹುಸೇನ ಜಮಾದಾರ,
ಪುರಸಭೆ ಮಾಜಿ ಸದಸ್ಯರಾದ ಅಯೂಬ ಬಾಗವಾನ, ಶಬ್ಬೀರ ಖಾಜಿ, ಜಹಾಂಗೀರ ಸೌದಾಗರ, ಅಸ್ಲಾಂ ಕಡಣಿ, ಮಸ್ತಾಕ ಇಂಡಿಕರ, ಜನುದ್ದೀನ ಬಾಗವಾನ, ಮಹಿಬೂಬ ಅರಬ, ವ್ಯಾಪಾರಿಗಳಾದ ನಿಸಾರ ಬಾಗವಾನ, ರಿಯಾಜ್ ಗೌಂಡಿ, ಸಲೀಂ ಶೇಖ, ಹಾಜಿ ಪಟೇಲ, ಸಲೀಂ ತೋಳನೂರ, ಬಾಬುಸಾಬ ಸೌದಾಗರ, ಮುಬಾರಕ ಕೋಲಾರ, ಅಬು ತಾಲಿ ಹೊಸುರ, ಬಸೀರ ಇನಾಮದಾರ, ಮಹಮ್ಮದ ಗುಲಬರ್ಗಾ, ರಾಜ ಅಹಮ್ಮದ ತುರಕನಗೇರಿ, ಅಸ್ಲಂ ಪಟೇಲ ಮತ್ತಿತರಿದ್ದರು.
ನಗರದ ಅಂಜುಮನ ಮೈದಾನದಲ್ಲಿ ಪ್ರಾರ್ಥನೆ ಮಾಡಿದರು. ಝಿಯಾ ಉಲ್ ಹಕ್ ಉಮರಿ ನಮಾಜ ಭೋಧಿಸಿದರು. ತಾಲೂಕಿನ ತಡವಲಗಾ,ತಾಂಬಾ, ಸಾತಲಗಾಂವ, ಇಂಗಳಗಿ, ಸಾಲೋಟಗಿ ಭತಗುಣಕಿ ಸೇರಿದಂತೆ ಅನೇಕ ಕಡೆಗೆ ಈದಗಾ ಮೈದಾನದಲ್ಲಿ ಬಕ್ರೀದ್ ಪ್ರಯುಕ್ತ ಇಸ್ಲಾಂ ಸಮಾಜ ಬಾಂಧವರು ನಮಾಜ ಮಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 