ಬಾಚೇನಹಳ್ಳಿ ಕೊಟ್ರೇಶ್ ಇನ್ನಿಲ್ಲ
Bachenahalli Kotresh passes away
ಕೊಟ್ಟೂರು 10: ಕೊಟ್ಟೂರು ನಗರದ ಕರಿಬಸವೇಶ್ವರ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಧ್ಯಾಯರ ಪುತ್ರ ಬಾಚೇನಹಳ್ಳಿ ಕೊಟ್ರೇಶ್ ್ಲ58್ವ ಇಂದು ಮೃತರಾಗಿರುತ್ತಾರೆ. ಮೃತರು ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು, ಮೃತರು ಕಳೆದ 4-5 ವರ್ಷಗಳಿಂದ ಕಾಯಿಲೆಗೆ ಬಿದ್ದು ಹಾಸಿಗೆ ಹಿಡಿದಿದ್ದರು, ಮೃತ ಬಾಚೇನಹಳ್ಳಿ ಕೊಟ್ರೇಶ್ ಥ್ಯಾಂಕ್ಸ್ ಚಲನಚಿತ್ರ ಸೇರಿದಂತೆ ಅನೇಕ ಚಲನಚಿತ್ರಗಳಿಗೆ ಫೈನಾನ್ಸರ್ ಅಗಿ ಹೆಸರು ಮಾಡಿದ್ದರು, ಮೃತರು ಒಂದು ಹೆಣ್ಣು ಮಗು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಕೊಟ್ಟೂರು ನಗರದಲ್ಲಿ ವಿದ್ಯಾಭ್ಯಾಸ ಮಾಡಿದ್ದ , ಮೂಲ ಕೊಟ್ಟೂರಿನವರಾಗಿದ್ದ, ಬಾಚೇನಹಳ್ಳಿ ವಿದ್ಯಾರ್ಥಿದೆಸೆ ಯಿದ್ದಾಗಲೇ ಸಾಮಾಜಿಕ ಹೋರಾಟವನ್ನು ಮೈಗೂಡಿಸಿಕೊಂಡಿದ್ದರು, ಕೊಟ್ಟೂರು ನಗರದಲ್ಲಿ 90ರ ದಶಕದಲ್ಲೇ ಎ..ಐ.ಎಸ್.ಎಫ್, ಎ.ಐ.ವೈ. ಎಫ್, ವಿದ್ಯಾರ್ಥಿ ಸಂಘಟನೆ ಮಾಡಿ ಆ ಮೂಲಕ, ಹರಿಹರ-ಕೊಟ್ಟೂರು ರೈಲ್ವೆ ಮಾರ್ಗಕ್ಕೇ, ಜಿಂದಾಲ್ ಉಕ್ಕು ಕಾರ್ಖಾನೆ ಸ್ಥಾಪನೆ ಮಾಡಲು ಸರ್ಕಾರದ ವಿರುದ್ಧ ಬೆಂಗಳೂರು ನಗರಕ್ಕೆ ಅನೇಕ ಬಾರಿ ಜಾಥ ಹೊರಡಿಸುತ್ತಿದ್ದರು, ಹುಟ್ಟು ಹೋರಾಟಗಾರರಾಗಿದ್ದ, ಮೃತರು, ಬೆಂಗಳೂರು ನಗರದಲ್ಲಿ ಎನ್.ಜಿ.ಓ ಸ್ಥಾಪಿಸಿ ಆ ಮೂಲಕ ಸಾಮಾಜಿಕ ಹೋರಾಟ ಮಾಡುತ್ತಿದ್ದರು. ಮೃತರ ಅಂತ್ಯಕ್ರಿಯೆಯನ್ನು ಗುರುವಾರ ಕೊಟ್ಟೂರು ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತುಯೆಂದು ಮೃತ ಸಹೋದರ ಪುಲಿಕೇಶಿ ಮಲ್ಲಿಕಾರ್ಜುನ ಪ್ರಕಾಶ್ ಪತ್ರಿಕೆಗೆ ತಿಳಿಸಿದ್ದಾರೆ.
ಮೃತರ ಅತ್ಮಕ್ಕೆ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಿ ಶಾಂತಿ ನೆಲೆಸಲಿಯೆಂದು ಕಥೆಗಾರರಾದ ಕು.ವೀರಭದ್ರ್ಪ, ಪ್ರಾಣಿಪಕ್ಷಿ ಪ್ರಿಯ ತಜ್ಞ ಸಮದ್, ಬೆಣ್ಣಿ ಪ್ರಭಾಕರ, ಸುಧಾಕರಪಾಟೀಲ್, ಪತ್ರಕರ್ತ ಸಂಘದ ತಾಲ್ಲೂಕು ಆಧ್ಯಕ್ಷರು ಸೇರಿದಂತೆ ಕೋಗಳಿ ಗೌಡ್ರು , ಸೋಮಶೇಖರ, ಅಂಚೆ ಕೊಟ್ರೇಶ್, ಸೇರಿದಂತೆ ಅನೇಕರು ಅತ್ಮಕ್ಕೆ ಶಾಂತಿ ಕೋರಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 