ಬಬಲಾದಿ ಸದಾಶಿವ ಮುತ್ಯಾನ ಜಾತ್ರಾ ಮಹೋತ್ಸವ
Babaladi Sadashiva Muttya Fair Festival
ಜಮಖಂಡಿ 26: ಕೋವಿಡ್ -19 ಬಂದಾಗಿನಿಂದ ಜಗತ್ತಿಗೆ ಸುಭಿಕ್ಷೆ ಆಗಲಿ ಎಂದು ಮರೆಗುದ್ದಿ ಗ್ರಾಮದವರು ಸತತ ಐದು ವರ್ಷಗಳಿಂದ ಗ್ರಾಮದಲ್ಲಿ ಬಬಲಾದಿ ಸದಾಶಿವ ಮುತ್ಯಾನ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬಂದಿರುತ್ತಾರೆಂದು ಬಬಲಾದಿ ಚಂದ್ರಗಿರಿ ಮಠದ ಸಿದ್ದರಾಮಯ್ಯ ಮುತ್ಯಾ ಹೇಳಿದರು.
ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ಬಬಲಾದಿ ಸದಾಶಿವ ಮುತ್ಯಾನ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಎಲ್ಲವೂ ಇದೆ, ಆದರೆ ನೆಮ್ಮದಿ ಇಲ್ಲ, ಆಸ್ತಿ ಇದ್ದರು ಚಿಂತೆ, ಇಲ್ಲದಿದ್ದರೂ ಚಿಂತೆ, ನೀವು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕು.ಸಂಸ್ಕಾರ ಎಂದರೆ ಸಾಧು-ಸಂತರ ಪಾದ ಸೇವೆ ಮಾಡಿ, ಗುರು - ಹಿರಿಯರ ಸೇವೆ ಮಾಡಿ, ತಂದೆ- ತಾಯಿಗಳ ಪಾದ ಸೇವೆ ಮಾಡಿ, ಗುರುವಿನ ಮಾರ್ಗದರ್ಶನದಲ್ಲಿ ಮುಂದೆ ಸಾಗಬೇಕು. ಹಸಿದವರಿಗೆ ಧನಿದವರಿಗೆ, ಸಾಧು ಸಂತರಿಗೆ ಅನ್ನದಾನ ಮಾಡಿ, ಇದರಿಂದ ಜಗತ್ತಿಗೆ ಅನ್ನದ ಕೊರತೆ ಆಗುವದಿಲ್ಲ ಎಂದು ಆಶೀರ್ವಚನ ನೀಡಿದರು.
ಮಹಾಂತ ಮಹಾಸ್ವಾಮಿಗಳು, ಗುರುಪಾದ ಮಹಾಸ್ವಾಮಿಗಳು, ನಾಗಭೂಷಣ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಗ್ರಾಮದ ಭಕ್ತರು ಸತತ ಐದು ವಾರಗಳ ಕಾಲ ವಾರವನ್ನು ಕಟ್ಟುನಿಟ್ಟಿನಿಂದ ಪಾಲಿಸಿ, ಕಡೆಯ ವಾರದಂದು ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಯನ್ನು ಸುತ್ತಮುತ್ತಲಿನ ಗ್ರಾಮದವರು ವಿಜೃಂಭಣೆಯಿಂದ ಮಾಡಿದರು. ಗ್ರಾಮದ ಮಹಿಳೆಯರು ಜಾತಿ, ಭೇದ ಮರೆತು ನಸುಕಿನ ಜಾವದಲ್ಲಿ ಬಂದು ಸುಮಾರು 8 ಸಾವಿರ ಭಕ್ತರಿಗೆ ಹೋಳಿಗೆಯ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾ,ಪಂ, ಅಧ್ಯಕ್ಷ ಹನುಮಂತ ಗುಡಿ, ಭೀಮಪ್ಪ ಅವಟಿ, ಮಲ್ಲಪ್ಪ ಅಥಣಿ, ಹನುಮಂತ ಕನಕನ್ನವರ, ಶಿವನಗೌಡ ಪಾಟೀಲ, ಬಸಪ್ಪ ಗಿರಗಾವಿ, ರಾಜಕುಮಾರ ಪಾಟೀಲ ಸೇರಿದಂತೆ ಗ್ರಾಮಸ್ಥರು ಇದ್ದರು.ಸಿದ್ದಪ್ಪ ಕಳ್ಳಿಗುದ್ದಿ ಸ್ವಾಗತಿಸಿ, ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 