ಬಿಡಿಸಿಸಿಐ : ಅವ್ವಾರು ಮಂಜುನಾಥ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆ
BDCCI: Avvaru Manjunath elected unopposed as president
ಬಳ್ಳಾರಿ 05: ನಗರದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅವ್ವಾರು ಮಂಜುನಾಥ್ ಅವರು ಸರ್ವಾನುಮತದಿಂದ ಅವಿರೋಧವಾಗಿ ಬುಧವಾರ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷರಾಗಿರುವ ಯಶವಂತರಾಜ್ ನಾಗಿರೆಡ್ಡಿ ಬುಧವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಸಂಸ್ಥೆಯ ಭವಿಷ್ಯ ಮತ್ತು ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅಧಿಕಾರ ತ್ಯಾಗ ಮಾಡಿದ ಕಾರಣ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು. ಎಸ್. ದೊಡ್ಡನಗೌಡ ಅವರು ಹಿರಿಯ ಉಪಾಧ್ಯಕ್ಷರಾಗಿ, ಪಿ. ಪಾಲಣ್ಣ ಅವರು ಉಪಾಧ್ಯಕ್ಷರಾಗಿ, ನಾಗಳ್ಳಿ ರಮೇಶ್ ಅವರು ಖಜಾಂಚಿಗಳಾಗಿ ಅವಿರೋಧವಾಗಿ ಆಯ್ಕೆಯಾದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಈವರೆಗೆ ಅಧ್ಯಕ್ಷರಾಗಿದ್ದ ಯಶವಂತರಾಜ ನಾಗಿರೆಡ್ಡಿ ಅವರು, ಸಂಸ್ಥೆಯು ವಜ್ರಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಸಂಸ್ಥೆಯ ಭವಿಷ್ಯ ಹಾಗೂ ಸಮರ್ಥ ನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಅಧಿಕಾರ ಹಸ್ತಾಂತರ ಮಾಡಲಾಗಿದೆ ಎಂದರು.
ಗೌರವ ಕಾರ್ಯದರ್ಶಿಗಳಾಗಿ ಕೆ.ಸಿ. ಸುರೇಶಬಾಬು, ಉಪಾಧ್ಯಕ್ಷರಾಗಿ ಸೊಂತ ಗಿರಿಧರ್, ಜಂಟಿ ಕಾರ್ಯದರ್ಶಿಗಳಾಗಿ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ ಮತ್ತು ವಿ. ರಾಮಚಂದ್ರ ಅವರು ಮುಂದುವರೆದಿದ್ದಾರೆ. ಮಾಜಿ ಅಧ್ಯಕ್ಷರಾದ ಸಿ. ಶ್ರೀನಿವಾಸರಾವ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಎಸ್. ಸತ್ಯನಾರಾಯಣ, ಜೆ. ರಾಜೇಶ್, ನೇಕಾರ ನಾಗರಾಜ್, ತಾಟಕೂರಿ ಶ್ರೀನಿವಾಸರಾವ್, ಪಿ. ಗೀರೀಶ್, ಎಸ್. ಜಿತೇಂದ್ರ ಪ್ರಸಾದ್, ಯು. ಗೋವಿಂದರೆಡ್ಡಿ, ಎಚ್. ರಾಜೇಶ್ ಕುಮಾರ್, ಎಸ್.ಪಿ. ವೆಂಕಟೇಶ್, ವಿ.ಕೆ.ಎಲ್. ದೀಪಕ್, ಆರ್. ನಾಗರಾಜ್, ಪಿ. ವೇಣುಗೋಪಾಲ್ ಗುಪ್ತ, , ಜಿ. ರಾಘವೇಂದ್ರ ರೆಡ್ಡಿ, ಬಿ. ನಾಗರಾಜ್ ಮತ್ತು ಕೆ. ಗೋಪಾಲರೆಡ್ಡಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 