ನವಜಾತ ಶಿಶುವಿನ ಆರೈಕೆ ಕುರಿತು ಜಾಗೃತಿ ಕಾರ್ಯಕ್ರಮ
ಲೋಕದರ್ಶನ ವರದಿ
ಬೆಳಗಾವಿ 27: ನಗರದ ಕೆಎಲ್‌ಇ ವೇಣುಧ್ವನಿ 90.4 ಎಫ್. ಎಮ್., ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಗುರುವಾರ ದಿ. 27ನೇ ನವೆಂಬರ 2025 ರಂದು ನವಜಾತ ಶಿಶುವಿನ ಆರೈಕೆ ಕುರಿತು ನೇರ ಫೋನ್-ಇನ್ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಳಗಾವಿಯ ಕೆಎಲ್‌ಇ ಡಾ ಪ್ರಭಾಕರ ಕೋರೆ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞೆ ಡಾ. ಸೋನಾಲಿ ಬಿಜ್ಜರಗ್ಗಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನವಜಾತ ಶಿಶುವಿನ ಆರೈಕೆ ಹೇಗೆ ಮಾಡಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಿದರು.
ಗರ್ಭಾವಸ್ಥೆಯಲ್ಲಿ ಮಗುವು ಹೇಗೆಲ್ಲಾ ಬೆಳವಣಿಗೆ ಪಡೆಯುತ್ತದೆ ಎಂಬುದು ತಿಳಿಯದೆ ಇರಬಹುದು. ಆದರೆ ಹೇರಿಗೆಯ ನಂತರ ಸರಿಯಾದ ಪೋಷಣೆಯಿಂದ ನವಜಾತ ಶಿಶುವನ್ನು ಆರೋಗ್ಯಕರವಾಗಿ ನೋಡಿಕೊಳ್ಳಬಹುದು. ಹಲವಾರು ಪೋಷಕರಿಗೆ ಇದೊಂದು ಸವಾಲಿನ ಸಂಗತಿಯಾಗಿರುತ್ತದೆ ಆದ್ದರಿಂದ ಮಗುವನ್ನು ಹೇಗೆ ಕಾಳಜಿವಹಿಸಿಬೇಕು ಎಂಬುದರ ಕುರಿತು ಸಂಗಾತಿ ಮನೆಯ ಹಿರಿಯರ ಸಹಾಯ ಪಡೆಯುವುದು ಮುಖ್ಯ.
ಹವಾಮಾನ ಬದಲಾವಣೆಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಶೀತ, ಜ್ವರ, ಕೆಮ್ಮು ಬರುವ ಸಾಧ್ಯತೆವಿರುತ್ತದೆ, ಶಿತ ಬಂದರೆ ಸಾಕು ಜ್ವರ ಹಿಂದೆಯೇ ಪ್ರಾರಂಭವಾಗುತ್ತೆ, ಹಾಗಾಗಿ ನವಜಾತ ಶಿಶುವಿನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಚಳಿಗಾಲದ ಸಮಯದಲ್ಲಿ ಮಗುವಿಗೆ ಯಾವ ರೀತಿಯ ಬಟ್ಟೆ ತೋಡಬೇಕು, ಹೇಗೆ ಆರೈಕೆ ಮಾಡಬೇಕು ಎಂಬುದನ್ನು ಪೋಷಕರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು. ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ ರೋಗನಿರೋಧಕಶಕ್ತಿ ಹೆಚ್ಚಿಸುತ್ತದೆ, ಎದೆ ಹಾಲಿನಲ್ಲಿ ಪ್ರತಿಕಾಯಗಳು ಮತ್ತು ಪೋಷಕಾಂಶಗಳಿರುತ್ತವೆ, ಅದು ಮಗುವಿಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಎಂದರು.
ಬಹುತೇಕರು ಮಸಾಜ್ ಮಾಡುವುದರಿಂದ ಮಗುವಿನ ಬಣ್ಣ ಬದಲಾವಣೆಯಾಗುತ್ತದೆ ಎಮದು ಪರಿಗಣಿಸುತ್ತಾರೆ, ವಾಸ್ತವವಾಗಿ ಮಸಾಜ್ಗಳು ದೇಹದಲ್ಲಿ ರಕ್ತ ಪರಿಚಲನೆ ಸುಗಮವಾಗಿಸಿ ಚರ್ಮವು ನಳನಳಿಸುತ್ತದೆ, ಶಿಶುಗಳು ವಯಸ್ಕರಂತೆ ಬಲವಾಗಿರುವುದಿಲ್ಲ ಆದ್ದರಿಂದ ಮೃದುವಾಗಿ ಮಸಾಜ್ ಮಾಡಬೇಕು, ಯಾವ ತಿಂಗಳಲ್ಲಿ ಮಾಡಬೇಕು ಎಂಬುದರ ಕುರಿತು ವೈದ್ಯರ ಸಲಹೆ ಪಡೆಯಬೇಕು ಎಂದು ತಿಳಿಸಿದರು ಮತ್ತು ನವಜಾತ ಶಿಶುವಿಗಿರುವ ಲಸಿಕೆಗಳ ಕುರಿತು ಜಾಗೃತಿ ಮೂಡಿಸಿದರು ಮತ್ತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ. ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 