ಭ್ರಷ್ಟಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮ.
Awareness program against corruption
ಕಾರವಾರ 13:- ವಿಚಕ್ಷಣ ಜಾಗೃತಿ ಸಪ್ತಾಹ ಸಲುವಾಗಿ ಎನ್.ಪಿ.ಸಿ.ಐ.ಎಲ್ ಕೈಗಾ ವತಿಯಿಂದ ಕಾರವಾರದ ಸಿದ್ದರ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸೊಸೈಟಿ ಅಡಿಯಲ್ಲಿ ಬರುವ ಪ್ರೌಢಶಾಲೆ, ಪುರುಷ ಮತ್ತು ಮಹಿಳಾ ಕಾಲೇಜು, ಐ.ಟಿ.ಐ ಸಮೂಹದ ಆವರಣದಲ್ಲಿ ಗುರುವಾರ ಭ್ರಷ್ಟಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿ, ರಾಜನ ಭಾವಿ ಎಂಬ ನಾಟಕವನ್ನು ರಂಗತರಂಗ ತಂಡದ ಮೂಲಕ ಪ್ರಸ್ತುತ ಪಡಿಸಲಾಯಿತು. ಎನ್.ಪಿ.ಸಿ.ಐ.ಎಲ್ ಕೈಗಾದ ಸ್ಥಾನಿಯ ನಿರ್ದೇಶಕ ಬಿ. ವಿನೋದ ಕುಮಾರ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿಜಿಲೆನ್ಸ್ ಅಧಿಕಾರಿ ಮುಕೇಶ್, ವಿಶ್ವೇಶ್ವರ ಗೋವನ್‌ಕರ ಕೆ, ವೇಣುಗೋಪಾಲ್ ಹಾಗೂ ವನಿತಾ ಪ್ರಭಾಕರ್ ರಾಣೇ, ಪರಶುರಾಮ್ ರಾಣೆ, ರಾಜೇಂದ್ರ ರಾಣೆ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಅಧ್ಯಕ್ಷರು ಮತ್ತು ಗ್ರಾಮದ ಜನತೆ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 