ಚಿತ್ರನಟಿ ಮಾಲಾಶ್ರೀಗೆ ಶಾಂಭವಿ ಶ್ರೀ ಪ್ರಶಸ್ತಿ ಪ್ರದಾನ

ಬೈಲಹೊಂಗಲ 15: ಮನುಷ್ಯ ತನ್ನ ಬದುಕು ಹಸನು ಮಾಡಿಕೊಳ್ಳಲು ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು. 

ಅವರು ಪಟ್ಟಣದ ಮಾತಾ ದುರ್ಗಾ ಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವ ಅಂಗವಾಗಿ ಎರಡನೇ ದಿನದ ಕಾರ್ಯಕ್ರಮದಲ್ಲಿ ಧರ್ಮ ಸಭೆ, ಮಾಜಿ ಸೈನಿಕ ದಂಪತಿಗಳಿಗೆ ವೀರ ನಾರಿಯರಿಗೆ ಸತ್ಕಾರ ಕಾರ್ಯಕ್ರಮ ಮತ್ತು ಶಾಂಭವಿಶ್ರೀ ಪ್ರಶಸ್ತಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ,  ಜೀವನದಲ್ಲಿ ಸಾವು ಮತ್ತು ದೈವತ್ವದ ಮೇಲೆ ನಂಬಿಕೆಯನ್ನು ಕಳೆದುಕೊಳ್ಳದೆ ಸದ್ಭಾವನೆ ಬೆಳೆಸಿಕೊಳ್ಳುವ ಅಗತ್ಯವಿದೆ. ಯಾಂತ್ರೀಕತ ಬದುಕಿಗೆ ಮಾರು ಹೋಗಿ ಮನುಷ್ಯತ್ವವನ್ನೇ ಮರೆಯುತ್ತಿದ್ದೇವೆ. ಆದರೆ ಡಾ. ಮಹಾಂತೇಶ ಶಾಸ್ತ್ರಿ ಅವರು  ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಏರಿ​‍್ಡಸುವ ಮೂಲಕ ಭಕ್ತರನ್ನು ಸನ್ಮಾರ್ಗದತ್ತ ಕೊಂಡೊಯುತ್ತಿರುವುದು ಶ್ಲಾಘನೀಯ ಎಂದರು. 

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಭೀಮೇಶ್ವರ ಜೋಶಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯುವ ಜನತೆ ಶಿಕ್ಷಣದ ಜೊತೆಗೆ ಅಧ್ಯಾತ್ಮ ಮತ್ತು ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕು. ಧಾರ್ಮಿಕ, ಅಧ್ಯಾತ್ಮಿಕ ಜ್ಯೋತಿಷ್ಯ ಮೂಲಕ ಭಕ್ತರ ಕಷ್ಟಗಳನ್ನು ಕಳೆಯುವದರ ಜೊತೆಗೆ ಈ ಭಾಗದಲ್ಲಿ ಸಮಾಜಮುಖಿ ಸೇವೆ ಮಾಡುತ್ತಿರುವ ಡಾ.ಮಹಾಂತಶಾಸ್ರ್ತಿಗಳ ಕಾರ್ಯ ಶ್ಲಾಘನೀಯವಾದದ್ದು ಎಂದರು.  

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ, ಹಿರಿಯ ಪತ್ರಕರ್ತ ಈಶ್ವರ ಹೋಟಿ, ಗೋಕಾಕ ಲಕ್ಷ್ಮಿ ಎಜುಕೇಷನ್ ಟ್ರಸ್ಟ್‌ ಅಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಮಾತನಾಡಿದರು. 

ಮುರಗೋಡದ ದುರದುಂಡೇಶ್ವರಮಠದ ನೀಲಕಂಠ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ಡಾ. ಮಹಾಂತೇಶ ಶಾಸ್ತ್ರಿ ನೇತೃತ್ವ ವಹಿಸಿದ್ದರು. 

ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ, ಮಲ್ಲಿಕಾರ್ಜುನ ಬೋಳನ್ನವರ, ಸಿ ಕೆ ಮೆಕ್ಕೆದ, ಸೋಮನಾಥ ಸೊಪ್ಪಿಮಠ, ನಿಂಗಪ್ಪ ಚೌಡಣ್ಣವರ, ಡಾ ಕಿರಣ ನಾಯಕ, ಪಾಂಡಪ್ಪ ಇಂಚಲ, ಡಾ. ಮಹಾಂತೇಶ ಕಳ್ಳಿಬಡ್ಡಿ, ಈಶ್ವರ ಕೌಜಲಗಿ ವೇದಿಕೆ ಮೇಲೆ ಇದ್ದರು. 

ಚಿತ್ರ ನಟಿ ಮಾಲಾಶ್ರೀಗೆ 2021ನೇ ಸಾಲಿನ ಶಾಂಭವಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಸರಿಗಮಪ ಜಿ ಕನ್ನಡ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಜರುಗಿದವು. ಶಿಕ್ಷಕ ಸಂತೋಷ ಹುಣಶೀಕಟ್ಟಿ ನಿರೂಪಿಸಿದರು.