ಅನ್ನಪೂರ್ಣಮ್ಮ ಮನ್ನಾಪುರಗೆ ಪ್ರಶಸ್ತಿ ಪತ್ರ ವಿತರಣೆ
ಕೊಪ್ಪಳ 18: ಸಂಗೀತ ಕ್ಷೇತ್ರದ ಹಿರಿಯ ಕಲಾವಿದೆ ಅನ್ನಪೂರ್ಣಮ್ಮ ಮನ್ನಾಪುರ್ ರವರು ಬುದ್ಧ ಪೂರ್ಣಿಮೆಯ ದಿನದಂದು ಕಾವ್ಯ ಪೂರ್ಣಿಮೆ ಎಂದು ಕೊಪ್ಪಳ ವಿಶ್ವವಿದ್ಯಾಲಯ ದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕವನ ವಾಚನ ಮಾಡಿ ಕವನ ವಾಚನದ ಪ್ರಶಸ್ತಿ ಪತ್ರವನ್ನು ಪಡೆದುಕೊಂಡರು, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿಕೆ ರವಿ ರವರು ಪ್ರಶಸ್ತಿ ಪತ್ರ ವಿತರಣೆ ಮಾಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಅನೇಕ ಕಲಾವಿದರು ವಿವಿಧ ಕ್ಷೇತ್ರದ ಶಾಸಕರು ಸೇರಿದಂತೆ ವಿದ್ಯಾರ್ಥಿ ಬಳಗದವರು ಪಾಲ್ಗೊಂಡಿದ್ದರು,