ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಪಂಚ ಗ್ಯಾರಂಟಿ ಯೋಜನೆಗಳು

Five guarantee schemes to support the comprehensive development of Dharwad district

ಲೋಕದರ್ಶನ ವರದಿ 

ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಪಂಚ ಗ್ಯಾರಂಟಿ ಯೋಜನೆಗಳು 

  

ಧಾರವಾಡ  .19: ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಠಿಸಿರುವ ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಇಂದು ಸಮಾಜ ಎಲ್ಲ ಸ್ತರಗಳಲ್ಲಿ ಪರಿಣಾಮಕಾರಿಯಾದ ಗುಣಾತ್ಮಕ ಬದಲಾವಣೆಯೊಂದಿಗೆ ವಿಶ್ವದ ಗಮನ ಸೆಳೆದಿವೆ. ಇಚೆಗೆ ವಿಶ್ವ ಸಂಸ್ಥೆಯ ತಂಡ ರಾಜ್ಯಕ್ಕೆ ಭೇಟಿ ನೀಡಿ, ಗ್ಯಾರಂಟಿ ಯೋಜನೆಗಳ ಅಧ್ಯಯನ ಮಾಡಿ, ಮೆಚ್ಚುಗೆ ದಾಖಲಿಸಿರುವುದೇ ಇದಕ್ಕೆ ಸಾಕ್ಷಿ. 

ಬುದ್ದ, ಬಸವ, ಅಂಬೇಡ್ಕರ ಅವರ ವಿಚಾರಧಾರೆ ಮತ್ತು ತತ್ತ್ವ ಸಿದ್ಧಾಂತಗಳ ಆದಾರದ ಮೇಲೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀತಿ ಅನುಸರಿಸುತ್ತಿರುವ  ಕರ್ನಾಟಕ ರಾಜ್ಯ ಸರಕಾರವು ಬಡವ, ಹಿಂದುಳಿದ, ಮಹಿಳೆ, ನಿರುದ್ಯೋಗಿ ಯುವ ಸಮೂಹವನ್ನು ಕೇಂದ್ರಿಕರಿಸಿಕೊಂಡು ಐದು ಪ್ರಮುಖ ವಿಷಯಗಳ ಮೇಲೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. 

ಇದರಿಂದಾಗಿ  ಪ್ರಸ್ತುತ ಸರಕಾರದ ಅವಧಿಯಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಓದ್ಯೋಗಿಕ ಮತ್ತು ಸಾಂಸ್ಕೃತೀಕ ಬದಲಾವಣೆಗಳು ಕಾಣುತ್ತಿವೆ. ಅಸಹಾಯಕರಿಗೆ ಯೋಜನೆಗಳು ಆಸರೆ ಆಗಿವೆ. ಮಹಿಳಾ ಸಬಲೀಕರಣಕ್ಕೆ ಬಲ ತುಂಬಿವೆ. 

ಶಕ್ತಿಯಡಿ 2308 ಲಕ್ಷ ಜನ ಮಹಿಳೆಯರು ಉಚಿತ ಪ್ರಮಾಣ; ಗೃಹ ಜ್ಯೋತಿಯಡಿ 567125 ಮನೆಗಳಿಗೆ ಉಚಿತ ವಿದ್ಯುತ್; ಅನ್ನಭಾಗ್ಯದಡಿ 350324 ಕುಟುಂಬಗಳಿಗೆ ಉಚಿತ ಪಡಿತರ; ಗೃಹ ಲಕ್ಷ್ಮಿಯಡಿ 3,92,371 ಮಹಿಳೆಯರಿಗೆ ಆರ್ಥಿಕ ನೆರವು ಮತ್ತು ಯುವನಿಧಿಯಡಿ 5251 ನಿರುದ್ಯೋಗಿ ಯುವಕ, ಯುವತಿಯರಿಗೆ ಮಾಸಾಶನ. 


ಸದಾ ಪುರುಷ ಸಮಾಜದ ಇಚ್ಚೆಯಂತೆ ಮುನ್ನಡೆಯುತ್ತಿದ್ದ ಮಹಿಳೆಗೆ, ಈಗ  ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಸ್ವಾಲಂಭನೆ, ಉದ್ಯೋಗ, ಧಾರ್ಮಿಕ, ಸಾಂಸ್ಕೃತಿಕ ಸ್ವಾತಂತ್ರ್ಯ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ ಕಳೆದ ಜೂನ 11, 2023 ರಿಂದ  ಏಪ್ರಿಲ್ 30, 2025 ರವರೆಗೆ ಒಟ್ಟು 2308.04 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ 3.34 ಲಕ್ಷ ಮಹಿಳೆಯರು ಸರಕಾರಿ ಬಸ್‌ಗಳಲ್ಲಿ ನಿತ್ಯ ಉಚಿತ ಪ್ರಯಾಣ ಮಾಡುತ್ತಿದ್ದಾರೆ. 

ಮಹಿಳಾ ಸಮಾನತೆಯನ್ನು ಸಾಕಾರಗೊಳಿಸುವ ಮತ್ತು ಮಹಿಳೆಯರಿಗೆ ಉದ್ಯೋಗ ಸ್ವಾತಂತ್ರ್ಯ, ಆರ್ಥಿಕ ಸದೃಡತೆಯನ್ನು ಖಾತರಿಗೊಳಿಸುವ ಗೃಹಲಕ್ಷ್ಮಿ ಯೋಜನೆ ರಾಜ್ಯ ಸರಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ.  

 ಪ್ರತಿ ತಿಂಗಳು  ಅರ್ಹ ಯಜಮಾನಿಯ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ರೂ.2000 ಗಳು ಸರಕಾರದಿಂದ ಜಮೆ ಆಗುತ್ತಿವೆ. ಈ ಯೋಜನೆಯಿಂದ ಲಕ್ಷಾಂತರ ಹೆಣ್ಷುಮಕ್ಕಳ ಬದುಕು ಸುಂಧರವಾಗಿದೆ. ಸ್ವಂತ ಉದ್ಯೋಗದಿಂದ ಕೆಲವರು ತಮ್ಮ ಕುಟುಂಬಕ್ಕೆ ಆಸರೆಯಾದರೆ, ಕೆಲ ಮಹಿಳೆಯರು ಕುಟುಂಬವನ್ನೆ ಮುನ್ನಡೆಸುತ್ತಿದ್ದಾರೆ. 

  ಹೊಲಿಗೆ ಯಂತ್ರ ಮತ್ತು ರೊಟ್ಟಿ ಯಂತ್ರ ಖರೀದಿ, ಬ್ಯೂಟಿಷಿಯನ್, ಕಾಯಿಪಲ್ಲೆ ಮಾರಾಟ, ಬಳೆ-ಬಟ್ಟೆ ವ್ಯಾಪಾರ ಮಾಡಿ ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಅನೇಕ ಮಹಿಳೆಯರು ಸದುಪಯೋಗ ಮಾಡಿಕೊಂಡಿದ್ದಾರೆ. 

ಧಾರವಾಡ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 3,92,371 ಯಜಮಾನಿಯರಿದ್ದಾರೆ. ಯೋಜನೆ ಆರಂಭದಿಂದ ಜನವರಿ 2025 ರವರೆಗೆ 1282 ಕೋಟಿ 12 ಲಕ್ಷ 96 ಸಾವಿರ ರೂ.ಗಳನ್ನು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ.  

ಹಸಿವು ಮುಕ್ತ ಸಮಾಜ ನಿರ್ಮಾಣ ರಾಜ್ಯ ಸರಕಾರದ ಗುರಿ. ಅದಕ್ಕಾಗಿ ಅನ್ನಭಾಗ್ಯ ಯೋಜನೆ ಜಾರಿ ಆಗಿದೆ. ಪ್ರತಿ ಎಪಿಎಲ್, ಬಿಪಿಎಲ್ ಕುಟುಂಬಗಳ ಪಡಿತರ ಚೀಟಿಗಳಿಗೆ ಪ್ರತಿ ತಿಂಗಳು ಉಚಿತವಾಗಿ 10 ಕೆ.ಜಿ. ಅಕ್ಕಿ ನೀಡುವ ಈ ಯೋಜನೆಯು ಬಡವರ ಬದುಕಿಗೆ ಆಸರೆ ಆಗಿದೆ. ಹೆಚ್ಚುವರಿ ಅಕ್ಕಿ ಲಭ್ಯತೆ ಇಲ್ಲದಿದ್ದಾಗಲೂ ಅದರ ಬದಲಿಗೆ ರಾಜ್ಯ ಸರಕಾರ ನಗದು ಹಣ ಡಿಬಿಟಿ ಮೂಲಕ ಅವರ ಖಾತೆಗೆ ಜಮೆ ಮಾಡಿ, ಬದ್ದತೆ ತೋರಿದೆ. ಈಗ ಫೆಬ್ರವರಿಯಿಂದ ಮತ್ತೇ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ ತಲಾ 10 ಕೆ.ಜಿ ಅಕ್ಕಿ ಯನ್ನು ಉಚಿತವಾಗಿ ನೀಡಲು ಆದೇಶಿಸಿದೆ. 

ಧಾರವಾಡ ಜಿಲ್ಲೆಯಲ್ಲಿ  3,50,324 ಫಲಾನುಭವಿಗಳು ಅನ್ನಭಾಗ್ಯ ಯೋಜನೆ ಪ್ರಯೋಜನ ಪಡೆಯುತ್ತಿದ್ದಾರೆ. 

ಬಡವರ, ಮಧ್ಯಮ ವರ್ಗದವರ ಮನೆಗಳಿಗೆ ಉಚಿತ ಬೆಳಕು ನೀಡಿರುವ ಗೃಹಜ್ಯೋತಿ ಯೋಜನೆ, ಅವರ ಬದುಕಿಗೆ ಹೊಸ  ಭರವಸೆ ನೀಡಿದೆ. ಆರ್ಥಿಕ ಅಭಿವೃದ್ದಿಗೆ ಆಸರೆ ಆಗಿದೆ. ಪ್ರತಿ ತಿಂಗಳು ಕನಿಷ್ಠ 800 ರಿಂದ 1500 ವರೆಗೆ ವಿದ್ಯುತ್ ಬಿಲ್ಲ್‌ ಭರಿಸುತ್ತಿದ್ದವರು ಇಂದು, ಉಚಿತ ವಿದ್ಯುತ್ ಪಡೆದು, ನಿಶ್ಚಿಂತೆಯಿಂದ ಇದ್ದಾರೆ. ಆ ಉಳಿತಾಯದ ಹಣವನ್ನು ತಮ್ಮ ಜೀವನದ ದಿನನಿತ್ಯದ ಬೇಕುಬೇಡಿಕೆಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. 

ಧಾರವಾಡ ಜಿಲ್ಲೆಯಲ್ಲಿ  ಗೃಹ ಜ್ಯೋತಿ ಯೋಜನೆಯಡಿ 5,67,125 ಜನ ಗ್ರಾಹಕರಿದ್ದು, ಎಲ್ಲ ಅರ್ಹ ವಿದ್ಯತ್ ಬಳಕೆದಾರರೂ ಸರಾಸರಿ ಬಳಕೆಯ ಆಧಾರದ ಮೇಲೆ ಮಾಸಿಕ 200 ಯುನಿಟ್ ಗಳ ವರೆಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. 

ಪದವಿ, ಡಿಪ್ಲೋಮಾ ಪದವಿಧರ ನಿರೂದ್ಯೋಗಿಗಳು ಅಗತ್ಯಕ್ಕೆ ಅನುಗುಣವಾದ ಕೌಶಲ್ಯ ತರಬೇತಿ, ಉದ್ಯೋಗ ಸಿದ್ಧತೆ, ಹುಡುಕಾಟಕ್ಕೆ ಅನುಕೂಲವಾಗಲು ರಾಜ್ಯ ಸರಕಾರವು ಯುವನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಯುವನಿಧಿ ಯೋಜನೆಯಡಿ ಪದವಿ, ಡಿಪ್ಲೋಮಾ ಮುಗಿದು ನೋಂದಣಿಯಾದ ಎರಡು ವರ್ಷಗಳ ವರೆಗೆ ಪ್ರತಿ ತಿಂಗಳು ಸಹಾಯಧನ ಬಿಡುಗಡೆ ಮಾಡಲಾಗುತ್ತಿದೆ. 

ಇದರಿಂದ ಅನೇಕ ಯುವಕ, ಯುವತಿಯರು ಕಂಪ್ಯೂಟರ್ ತರಬೇತಿ, ಬ್ಯೂಟಿಷಿಯನ್ ತರಬೇತಿ ಪಡೆಯುತ್ತಿದ್ದಾರೆ. ಹಲವರು ಸ್ಪರ್ಧಾತ್ಮಕ ಪರೀಕ್ಷೆಗಳ ತಯ್ಯಾರಿ, ಬೇರೆ ಕಡೆಗಳಲ್ಲಿ ಉದ್ಯೋಗ ಹುಡುಕುತ್ತಿದ್ದಾರೆ. ಯುವನಿಧಿ ಯೋಜನೆಯು ವಿದ್ಯಾವಂತ ಯುವ ಸಮೂಹದಲ್ಲಿ ಹೊಸ ಬರವಸೆಯನ್ನು ಮೂಡಿಸಿದೆ.  ಕೌಶಲ್ಯ ಭರಿತ, ಸಶಕ್ತ ಯುವ ಸಮಾಜ ನಿರ್ಮಾಣಕ್ಕೆ ಸಾಕ್ಷಿ ಆಗುತ್ತಿದೆ. 

ಧಾರವಾಡ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ 7,816 ಜನ ಪದವಿ ಮತ್ತು ಡಿಪ್ಲೋಮಾ ಮಾಡಿರುವ ಯುವಕ, ಯುವತಿಯರು ನೋಂದಣಿ ಆಗಿರುತ್ತದೆ.  

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಓದ್ಯೋಗಿಕ ಮತ್ತು ಧಾರ್ಮಿಕ ಬದಲಾವಣೆಗಳಿಗೆ ಕಾರಣವಾಗುತ್ತಿರುವ ಮತ್ತು ಬಡವರ, ಹಿಂದುಳಿದವರ, ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿರುವ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿ ಅನುಷ್ಠಾನಗೊಂಡಿದ್ದು, ಇತರರಿಗೆ ಮಾದರಿ ಆಗಿವೆ.  

ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಬಗ್ಗೆ ಇತರ ರಾಜ್ಯ ಸರಕಾರಗಳ ತಂಡಗಳು, ಸಂಶೋಧಕರು ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ಮಾಡುತ್ತಿರುವುದು ಸಂತಸದ ಸಂಗತಿ.  ರಾಷ್ಟ್ರದ ಬೇರೆ ರಾಜ್ಯಗಳು ಕರ್ನಾಟಕ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಕರಿಸಿ, ತಮ್ಮ ರಾಜ್ಯಗಳಲ್ಲಿಯೂ ಘೋಷಿಸಿ, ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತಿರುವುದು ಯೋಜನೆಗಳ ಫಲಪ್ರದತೆಗೆ ಸಾಕ್ಷಿ ಆಗಿದೆ. 

 

ಶಕ್ತಿ ಯೋಜನೆ:  ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮತ್ತು ಶಿಕ್ಷಣ, ಉದ್ಯೋಗ, ಪ್ರವಾಸ ಮುಂತಾದ ಕಾರ್ಯ ಚಟುವಟಿಕೆಗಳಿಗೆ ಪೂರಕವಾಗಿ ತೊಡಗಿಸಿಕೊಳ್ಳಲು ಸಾದ್ಯವಾಗಿದ್ದು, ಶಕ್ತಿ ಯೋಜನೆಯಿಂದ ಸರ್ವಜನಾಂಗ ಮತ್ತು ಎಲ್ಲ ವರ್ಗದ ಮಹಿಳೆಯರಿಗೆ ಸರಕಾರಿ ಬಸ್ಸಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ನೀಡಿರುವ ಶಕ್ತಿ ಯೋಜನೆ ಮಹಿಳಾ ಸ್ವಾತಂತ್ರ್ಯ, ಸಬಲೀಕರಣ ಮತ್ತು ಸಾಮಾಜಿಕ ಸಮಾನತೆಗೆ ಶಕ್ತಿ ತುಂಬಿದೆ. 

ಧಾರವಾಡ ಜಿಲ್ಲೆಯಲ್ಲಿ ಜೂನ 11, 2023 ರಿಂದ ಏಪ್ರಿಲ್ 30, 2025 ರವರೆಗೆ ಶಕ್ತಿ ಯೋಜನೆಯಡಿ 938 ಸರಕಾರಿ ಬಸ್ಸಗಳಲ್ಲಿ 2308.04 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ರೂ. 48938.49 ಲಕ್ಷ ರೂ.ಗಳ ಪ್ರಯಾಣ ಆದಾಯ ಬಂದಿದೆ.  

ಗೃಹ ಜ್ಯೋತಿ: ಬಡವರ, ಮಧ್ಯಮವರ್ಗದ ಮನೆಗಳಿಗೆ ಉಚಿತ ವಿದ್ಯುತ್ ಮೂಲಕ ಸ್ಥಿರ ಬೆಳಕು ನೀಡುವ ಗೃಹ ಜ್ಯೋತಿ ಯೋಜನೆ ರಾಜ್ಯ ಸರಕಾರದ ಯಶಸ್ವಿ ಯೋಜನೆಗಳಲ್ಲಿ ಒಂದಾಗಿದೆ, 

ಧಾರವಾಡ ಜಿಲ್ಲೆ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಗೃಹ ಬಳಕೆ ಸೇರಿ ಒಟ್ಟು 5,67,125 ಜನ ಗ್ರಾಹಕರು ಗೃಹ ಜ್ಯೋತಿ ಯೋಜನೆಯಡಿ ನೋಂದಣಿ ಆಗಿ, ಲಾಭ ಪಡೆಯುತ್ತಿದ್ದಾರೆ. ಎಲ್ಲ ಅರ್ಹ ಬಳಕೆದಾರರಿಗೂ ಸರಾಸರಿ ಬಳಕೆಯ ಆಧಾರದ ಮೇಲೆ ಮಾಸಿಕ 200 ಯುನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ.  

ಅನ್ನಭಾಗ್ಯ: ರಾಜ್ಯ ಸರಕಾರವು ಹಸಿವು ಮುಕ್ತ ಕರ್ನಾಟಕ ರೂಪಿಸಲು ಸಂಕಲ್ಪದೊಂದಿಗೆ ಆಹಾರ ಭದ್ರತಾ ಯೋಜನೆಯಡಿ ಪಡಿತರ ಚೀಟಿಯ ಪ್ರತಿಯೊಬ್ಬ ಪಡಿತರ ಫಲಾನುಭವಿಗೆ ಪ್ರತಿ ತಿಂಗಳು 10ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳ್ಳಿಸಲಾಗಿದೆ. 

ಹೆಚ್ಚುವರಿ ಅಕ್ಕಿ ಅಲಭ್ಯತೆ ಉಂಟಾದಾಗ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ ಬಿಪಿಎಲ್ ಕುಟುಂಬಗಳಿಗೆ ತಲಾ ರೂ.170 ಗಳನ್ನು ಫಲಾನುಭವಿ ಖಾತೆಗೆ ಡಿಬಿಟಿ ಮೂಲಕ ನೇರ ವರ್ಗಾವಣೆ ಮಾಡಲಾಗಿತ್ತು. ಫೆಬ್ರವರಿ 2025 ಮಾಹೆಯಿಂದ ಡಿಬಿಟಿ ಸ್ಥಗಿತಗೊಳಿಸಲಾಗಿದ್ದು, ಫೆಬ್ರವರಿ ಮಾಹೆಯಿಂದ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 05 ಕೆಜಿ ಮತ್ತು ಕೇಂದ್ರ ಸರ್ಕಾರದ ಎನ್‌.ಎಫ್‌.ಎಸ್‌.ಎ ಯೋಜನೆಯಡಿ 05 ಕೆಜಿ ಒಟ್ಟು 10 ಕೆಜಿಯಂತೆ ಅಕ್ಕಿಯನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ.  

ಧಾರವಾಡ ಜಿಲ್ಲೆಯಲ್ಲಿ ಒಟ್ಟು ಪಡಿತರ ಚೀಟಿಗಳು 3,50,324 ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. 358.29 ಕೋಟಿ ರೂಪಾಯಿಗಳು ಡಿಬಿಟಿ ಮೂಲಕ ಸಂದಾಯ ಮಾಡಿದೆ. ಎನ್‌ಪಿಸಿಐ ಮತ್ತು ಆಧಾರ ದೃಢಿಕರಣದ ಕಾರಣಗಳಿಂದ 15315 ಫಲಾನುಭವಿನಗಳಿಗೆ ಡಿಬಿಟಿ ವರ್ಗಾವಣೆ ಬಾಕಿ ಇರುತ್ತದೆ. ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ 96 ರಷ್ಟು ಸಾಧನೆ ಮಾಡಿರುತ್ತದೆ. ಅನ್ನಭಾಗ್ಯ ಯೋಜನೆ ಜನರ ಹಸಿವು ಹಿಂಗಿಸುವಲ್ಲಿ ಯಶಸ್ವಿಯಾಗಿದೆ. 

ಗೃಹಲಕ್ಷಿ: ಮಹಿಳಾ ಸಮಾನತೆ ಸಕಾರಗೊಳಿಸುವ ಮತ್ತು ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ಬಲ ತುಂಬಿಸುವ ರಾಜ್ಯ ಸರಕಾರದ ಗೃಹಲಕ್ಷಿ ಯೋಜನೆ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ.2000 ಗಳನ್ನು ಬ್ಯಾಂಕ ಖಾತೆಗೆ ನೇರ ಜಮೆ ಮೂಲಕ ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡಿದೆ. 

ಗೃಹಲಕ್ಷಿ ಯೋಜನೆ ಸಹಾಯಧನದಲ್ಲಿ ಅನೇಕ ಮಹಿಳೆಯರು ಸ್ವ ಉದ್ಯೋಗ ಮಾಡಿ, ಕುಟುಂಬ ಆದಾಯ ಹೆಚ್ಚಿಸಿದ್ದಾರ.ೆ ಅನೇಕರು ಗ್ರಹಲಕ್ಷಿ ಹಣವನ್ನು ಶಾಲೆ, ಶಿಕ್ಷಣ, ಉದ್ಯೋಗಕ್ಕೆ ಬಳಸಿ ಸಾರ್ಥಕತೆ ಮೆರೆದಿದ್ದಾರೆ.  

ಧಾರವಾಡ ಜಿಲ್ಲೆಯಲ್ಲಿ 404848 ಜನ ಫಲಾನುಭವಿಗಳಿದ್ದು, ಅದರಲ್ಲಿ 3,92,371 ಜನ ಯಜಮಾನಿಯರು ಗೃಹಲಕ್ಷಿ ಪ್ರಯೋಜನ ಪಡೆಯುತ್ತಿದ್ದಾರೆ. ಆಗಸ್ಟ 2023 ರಿಂದ ಜನವರಿ 2025 ರವರೆಗೆ ತಲಾ 2000 ರೂಪಾಯಿಗಳಂತೆ ಒಟ್ಟು 1282 ಕೋಟಿ 12 ಲಕ್ಷ 96 ಸಾವಿರ ಸಹಾಯಧನ ಫಲಾನುಭವಿಗಳಿಗೆ ಜಮೆ ಆಗಿರುತ್ತದೆ. ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ 97 ರಷ್ಟು ಸಾಧನೆ ಮಾಡಿರುತ್ತದೆ.   

ಯುವನಿಧಿ: ವಿದ್ಯಾವಂತ ನಿರುದ್ಯೋಗಿಗಳಿಗೆ ಅದರಲ್ಲೂ ಮುಖ್ಯವಾಗಿ ಡಿಪ್ಲೋಮಾ ಮತ್ತು ಪದವಿ ಪೂರ್ಣಗೊಳಿಸಿ, ಉದ್ಯೋಗ ಹುಡುಕಾಟದಲ್ಲಿರುವ ಯುವಕ ಯುವತಿಯರಿಗೆ ಗರಿಷ್ಠ ಎರಡು ವರ್ಷಗಳ ವರೆಗೆ ಉದ್ಯೋಗ ಭದ್ರತೆ ನೀಡುವ ರಾಜ್ಯ ಸರಕಾರದ ಯುವನಿಧಿ ಯೋಜನೆ ಯುವ ಸಮೂಹದಲ್ಲಿ ಉದ್ಯೋಗದ ಆಶಾಕಿರಣವಾಗಿದೆ. 

ಡಿಸೆಂಬರ್ 2023ಕ್ಕೆ ಆರಂಭವಾಗಿರುವ ಯುವನಿಧಿ ಯೋಜನೆ 2022-23ನೇ ಸಾಲಿನಿಂದ ಪದವಿ ಪಾಸಾಗಿರುವ ಪದವಿಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.3 ಸಾವಿರ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.1500ಗಳನ್ನು ನಿರುದ್ಯೋಗ ಭತ್ಯೆಯಾಗಿ ನಿಡುತ್ತದೆ. ನಿರುದ್ಯೋಗ ಭತ್ಯೆಯು ಉದ್ಯೋಗ ಸೀಗುವವರೆಗೆ ಅಥವಾ ನೊಂದಣಿಯಾದಾಗಿನಿಂದ ಗರಿಷ್ಠ ಎರಡು ವರ್ಷಗಳ ವರಗೆ ಸೀಗುತ್ತದೆ. 

ಧಾರವಾಡ ಜಿಲ್ಲೆಯಲ್ಲಿ 7,816 ಜನ ಪದವಿ ಹಾಗೂ ಡಿಪ್ಲೋಮಾ ಪೂರೈಸಿರುವ ನಿರುದ್ಯೋಗ ಯುವಕ ಯುವತಿಯರು ನೊಂದಣಿ ಆಗಿದ್ದಾರೆ, 

ಯುವನಿಧಿ ಯೋಜನೆಯ ಪ್ರಯೋಜನವನ್ನು 2409 ಪುರುಷ ಹಾಗೂ 2842 ಮಹಿಳೆಯರು ಪಡೆಯುತ್ತಿದ್ದಾರೆ. ಇದರಲ್ಲಿ 5116 ಜನ ಪದವಿಧರರು ಮತ್ತು 135 ಜನ ಡಿಪ್ಲೋಮಾ ಫಲಾನುಭವಿಗಳಿದ್ದಾರೆ. ಇಲ್ಲಿವರೆಗೆ ಒಟ್ಟು 8,92,30,000 ರೂ.ಗಳನ್ನು ಡಿಬಿಟಿ ಮೂಲಕ ನಿರುದ್ಯೋಗ ಪದವಿಧರರಿಗೆ ನೀಡಲಾಗಿದೆ.