ಗದಗ

ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿ ಬಂಧನ

ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿ ಬಂಧನ


ಲಕ್ಷ್ಮೇಶ್ವರ, 25: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ್ ಗಡದ ಹಾಗೂ ಕ್ರೈಂ ಪಿಎಸ್‌ಐ ಡಿ.ಕೆ. ರಾಥೋಡ್ ನೇತೃತ್ವದ ತಂಡ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ.  ಬಂಧಿತ ಆರೋಪಿಯನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲ್ಲೂಕಿನ ಹುಲಗೂರು ಗ್ರಾಮದ ಯುವಕ ಆಕಾಶ ತಂದೆ ನೀಲಪ್ಪ ಗಂಗಣ್ಣವರ್ (22) ಎಂದು ಗುರುತಿಸಲಾಗಿದೆ.  

183 ಗ್ರಾಂ ಗಾಂಜಾ ವಶ  

ಆರೋಪಿ ಆ.24ರಂದು ಮಧ್ಯಾಹ್ನ 12.57ರ ಸುಮಾರಿಗೆ ಲಕ್ಷ್ಮೇಶ್ವರ-ಹುಬ್ಬಳ್ಳಿ ರಸ್ತೆಯ ರಾಮಗಿರಿ ಚೆಕ್ಪೋಸ್ಟ್‌ ಸಮೀಪದ ಗುಡಗೇರಿ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಸಿದ್ಧನಾಗಿ ನಿಂತಿದ್ದ ಎನ್ನಲಾಗಿದೆ.  ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಆರೋಪಿಯ ವಶದಲ್ಲಿದ್ದ ಒಟ್ಟು 183 ಗ್ರಾಂ ತೂಕದ, ಅಂದಾಜು ?9,150 ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.  

ಆರೋಪಿ ಗಾಂಜಾವನ್ನು ತನ್ನ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಹೊಂದಿದ್ದ ಆರೋಪದಡಿ ಎನ್ಡಿಪಿಎಸ್ ಕಾಯ್ದೆ-1985ರ ಕಲಂ 20(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ. 


ಸುದ್ದಿ ಓದಿ